ADVERTISEMENT

ಮಕ್ಕಳಿಗೆ ಶಿಕ್ಷಣ ನೀಡುವತ್ತ ಹೆಚ್ಚುತ್ತಿರುವ ಆಸಕ್ತಿ: ಫಾದರ್ ವಿಜಯರಾಜ್ ಗಂಟ್ಯಾಳ್

ಮಕ್ಕಳ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2021, 10:37 IST
Last Updated 13 ನವೆಂಬರ್ 2021, 10:37 IST
ಕವಿತಾಳದ ನವಚೇತನ ಶಾಲೆಯಲ್ಲಿ ಶನಿವಾರ ನಡೆದ ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಸಿಆರ್‌ಪಿ ಹುಸೇನ್ ಬಾಶಾ ಉದ್ಘಾಟಿಸಿದರು
ಕವಿತಾಳದ ನವಚೇತನ ಶಾಲೆಯಲ್ಲಿ ಶನಿವಾರ ನಡೆದ ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಸಿಆರ್‌ಪಿ ಹುಸೇನ್ ಬಾಶಾ ಉದ್ಘಾಟಿಸಿದರು   

ಕವಿತಾಳ: ‘ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಕುರಿತು ಇತ್ತೀಚೆಗೆ ಪ್ರತಿಯೊಬ್ಬ ಪಾಲಕರು ಕಾಳಜಿ ವಹಿಸುತ್ತಿರುವುದು ಉತ್ತಮ ಬೆಳವಣಿಗೆ’ ಎಂದು ಫಾದರ್‍ ವಿಜಯರಾಜ್ ಗಂಟ್ಯಾಳ್‍ ಹೇಳಿದರು.

ಪಟ್ಟಣದ ನವಚೇತನ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಇಂಗ್ಲೀಷ್‍ ಮಾಧ್ಯಮ ಶಾಲೆಯ ಉದ್ಘಾಟನೆ ಹಾಗೂ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಆಸಕ್ತಿ ತೋರುವ ಗ್ರಾಮೀಣ ಭಾಗದ ಪಾಲಕರು ಒಳ್ಳೆಯ ಶಾಲೆಗಳ ಬಗ್ಗೆ ಯೋಚಿಸುತ್ತಿರುವುದು ಸಹಜವಾಗಿದೆ‘ ಎಂದರು.

‘ಕೊವಿಡ್‍ ಹಿನ್ನೆಲೆಯಲ್ಲಿ ದೀರ್ಘ ಅವಧಿಗೆ ಶಾಲೆಗಳು ಮುಚ್ಚಿದ ಪರಿಣಾಮ ಮಾನಸಿಕವಾಗಿ ಕುಗ್ಗಿದ್ದ ಮಕ್ಕಳಲ್ಲಿ ಇದೀಗ ತರಗತಿಗಳು ಆರಂಭವಾದ ನಂತರ ಚೈತನ್ಯ ಕಂಡು ಬರುತ್ತಿದೆ’ ಎಂದರು.

ADVERTISEMENT

ಫಾದರ್ ವಿಜಯಕುಮಾರ ಮಾತನಾಡಿ, ‘ಮಕ್ಕಳ ಭಾವನೆಗಳನ್ನು ಅರಿತುಕೊಂಡು ಉತ್ತಮ ಶಿಕ್ಷಣ ನೀಡುವುದರ ಜತೆಗೆ ಮಕ್ಕಳ ಸರ್ವಾಂಗೀಣ ಅಭಿವೃದ್ದಿಯ ಬಗ್ಗೆ ಕಾಳಜಿ ವಹಿಸಬೇಕಿದೆ’ ಎಂದರು.

ಶಿಕ್ಷಕ ಚಂದ್ರಶೇಖರ, ಶಾಂತಪ್ಪ ಮತ್ತು ಸಂಪನ್ಮೂಲ ವ್ಯಕ್ತಿ ಹುಸೇನ್‍ ಬಾಶಾ ಮಾತನಾಡಿದರು.

ಸಿಸ್ಟರ್ ಮೇಬಲ್‍, ಸುಶೀಲಾ, ಹಿಲ್ಡಾ, ಫಾದರ್ ರಾಯಪ್ಪ, ಮುಖಂಡ ಮರಿಯಪ್ಪ ಮತ್ತಿತರರು ಇದ್ದರು.

ಮಾಜಿ ಪ್ರಧಾನಿ ಜವಾಹರ್‍ ಲಾಲ್‍ ನೆಹರೂ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.

ಜಿಲ್ಲಾ ಮಟ್ಟದ ಉತ್ತಮ ಸಿಆರ್‌ಪಿ ಪ್ರಶಸ್ತಿ ಪಡೆದ ಹುಸೇನ್ ಬಾಶಾ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಶಿಕ್ಷಕ ರಾಜಶೇಖರ ಅಮೀನಗಡ ಕಾರ್ಯಕ್ರಮ ನಿರೂಪಣೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.