ADVERTISEMENT

ಗುರು ಶಿಷ್ಯರ ಪರಂಪರೆ ಮುಂದುವರಿದಿರುವುದು ಸ್ವಾಗತಾರ್ಹ: ಅಜ್ಜನವನರ ತುಲಾಭಾರ

ಗಾನಯೋಗಿ ಸಂಗೀತ ಪಾಠಶಾಲೆ ವಾರ್ಷಿಕೋತ್ಸವ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2025, 6:41 IST
Last Updated 17 ಡಿಸೆಂಬರ್ 2025, 6:41 IST
ರಾಯಚೂರಿನಲ್ಲಿ ಏರ್ಪಡಿಸಿದ್ದ ಸಂಗೀತ ಕಾರ್ಯಕ್ರಮವನ್ನು ಕಿಲ್ಲೆ ಬೃಹನ್ ಮಠದ ಶಾಂತ ಶಿವಾಚಾರ್ಯ ಸ್ವಾಮೀಜಿ, ಸೋಮವಾರಪೇಟೆ ಹಿರೇಮಠದ ಅಭಿನವ ಶ್ರೀ ರಾಚೋಟಿವೀರ ಶಿವಾಚಾರ್ಯ ಸ್ವಾಮೀಜಿ ಜಂಟಿಯಾಗಿ ಉದ್ಘಾಟಿಸಿದರು. ಶಾಸಕ ಬಸನಗೌಡ ದದ್ದಲ್ ಉಪಸ್ಥಿತರಿದ್ದರು
ರಾಯಚೂರಿನಲ್ಲಿ ಏರ್ಪಡಿಸಿದ್ದ ಸಂಗೀತ ಕಾರ್ಯಕ್ರಮವನ್ನು ಕಿಲ್ಲೆ ಬೃಹನ್ ಮಠದ ಶಾಂತ ಶಿವಾಚಾರ್ಯ ಸ್ವಾಮೀಜಿ, ಸೋಮವಾರಪೇಟೆ ಹಿರೇಮಠದ ಅಭಿನವ ಶ್ರೀ ರಾಚೋಟಿವೀರ ಶಿವಾಚಾರ್ಯ ಸ್ವಾಮೀಜಿ ಜಂಟಿಯಾಗಿ ಉದ್ಘಾಟಿಸಿದರು. ಶಾಸಕ ಬಸನಗೌಡ ದದ್ದಲ್ ಉಪಸ್ಥಿತರಿದ್ದರು   

ರಾಯಚೂರು: ನಾದ ಲೋಕ ಕಲಾಬಳಗದ ವತಿಯಿಂದ ಗಾನಯೋಗಿ ಸಂಗೀತ ಪಾಠಶಾಲೆಯ 5ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಸಂಗೀತ ಕಾರ್ಯಕ್ರಮ ಹಾಗೂ ಗದುಗಿನ ವೀರೇಶ್ವರ ಪುಣ್ಯ ಆಶ್ರಮದ ಪೀಠದ ಶ್ರೀ ಕಲ್ಲಯ್ಯ ಅಜ್ಜನವನರ ತುಲಾಭಾರ ಕಾರ್ಯಕ್ರಮ ನಡೆಯಿತು.

ಕಿಲ್ಲೆ ಬೃಹನ್ ಮಠದ ಶಾಂತ ಶಿವಾಚಾರ್ಯ ಸ್ವಾಮೀಜಿ, ಸೋಮವಾರಪೇಟೆ ಹಿರೇಮಠದ ಅಭಿನವ ಶ್ರೀ ರಾಚೋಟಿವೀರ ಶಿವಾಚಾರ್ಯ ಸ್ವಾಮೀಜಿ, ಮಂಗಳವಾರ ಪೇಟೆಯ ಶ್ರೀ ವೀರ ಸಂಗಮೇಶ್ವರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು.

ಗ್ರಾಮೀಣ  ಶಾಸಕ ಬಸನಗೌಡ ದದ್ದಲ್ ಮಾತನಾಡಿ, ‘ಗುರು ಶಿಷ್ಯ ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿರುವುದು ಸ್ವಾಗತಾರ್ಹವಾಗಿದೆ. ಸಂಗೀತಕ್ಕೆ ಪುಟ್ಟರಾಜ ಗುರುಗಳ ಕೊಡುಗೆ ಅನನ್ಯವಾಗಿದೆ’ ಹೇಳಿದರು

ADVERTISEMENT

ಚಂದ್ರಶೇಖರ ಪಾಟೀಲ ಮಿರ್ಜಾಪುರ ಮಾತನಾಡಿದರು. ಬಸವ ಕೇಂದ್ರದದ ಅಧ್ಯಕ್ಷ ರಾಚನಗೌಡ ಕೊಳುರ, ಪಂಡಿತ ಸುಗೂರೇಶ್ ಅಕ್ಕಿಹಾಳ,  ಗುರುಪಾದಯ್ಯ ಸ್ವಾಮಿ ,ದೊಡ್ಡಯ್ಯ ಮಾಸ್ ದೊಡ್ಡಿ ವೀರೇಂದ್ರ ಪಾಟೀಲ, ಲಕ್ಷ್ಮಣ್ ದಾಸರಿ, ಪರಮೇಶ್ವರ್ ಸಾಲಿಮಠ ಪಾಲ್ಗೊಂಡಿದ್ದರು.

ವಿಶೇಷ ಆವಾನಿತ ಕಲಾವಿದರಾದ ವೀರಭದ್ರಪ್ಪ ಹಿರ ಬೆಣಕಲ್ ತಬಲಾ, ಗುರುಬಸವ ಮಹಾಮನಿ ವಯೊಲಿನ್ ನುಡಿಸಿದರು. ಉಚ್ಚಯ್ಯ ಸ್ವಾಮಿ ಹಾಗೂ ಶ್ರಾವಣಕುಮಾರ ವಟರ ಶಹಪುರ ಗಾಯನ ಪ್ರಸ್ತುತಪಡಿಸಿದರು.