ADVERTISEMENT

ಜೋಕಾಲಿ, ಅಂಗಡಿ ಜಾಗದ ಬಾಡಿಗೆ ಹರಾಜು

​ಪ್ರಜಾವಾಣಿ ವಾರ್ತೆ
Published 21 ಜೂನ್ 2025, 14:18 IST
Last Updated 21 ಜೂನ್ 2025, 14:18 IST
ಮುದಗಲ್‌ನ ಪುರಸಭೆ ಸಭಾಂಗಣದಲ್ಲಿ ಮೊಹರಂ ಹಬ್ಬದ ಅಂಗವಾಗಿ ಹರಾಜು ಪ್ರಕ್ರಿಯೆ ನಡೆಯಿತು
ಮುದಗಲ್‌ನ ಪುರಸಭೆ ಸಭಾಂಗಣದಲ್ಲಿ ಮೊಹರಂ ಹಬ್ಬದ ಅಂಗವಾಗಿ ಹರಾಜು ಪ್ರಕ್ರಿಯೆ ನಡೆಯಿತು   

ಮುದಗಲ್: ಮೊಹರಂ ಅಂಗವಾಗಿ ಪುರಸಭೆ ಸಭಾಂಗಣದಲ್ಲಿ ಕೋಟೆಯ ಕಾಟೆ ದರ್ವಾಜ್ ಮುಂಭಾಗದ ವಿವಿಧ ಅಂಗಡಿಗಳ ಜಾಗ ಹಾಗೂ ಜೋಕಾಲಿ ಬಾಡಿಗೆಗೆ ಶನಿವಾರ ಹರಾಜು ನಡೆಯಿತು.

ಅಂಗಡಿಗಳ ಜಾಗದ ಬಾಡಿಗೆ ವಸೂಲಾತಿ ಹರಾಜನ್ನು ₹4.26 ಲಕ್ಷಕ್ಕೆ ಮುರ್ತುಜಾ ಸಾಬ್ ಖಾಜಾ ಸಾಬ್ ಹಳೆಪೇಟೆ ಅವರು ಪಡೆದರು.

ಜೋಕಾಲಿ ಹರಾಜಿನಲ್ಲಿ ಪಾಲ್ಗೊಂಡಿದ್ದವರ ದಾಖಲಾತಿಗಳು ಸರಿ ಇಲ್ಲದ ಕಾರಣ ಹರಾಜುದಾರನನ್ನು ಪರಿಗಣಿಸಲಿಲ್ಲ ಎಂದು ಮುಖ್ಯಾಧಿಕಾರಿ ಪ್ರವೀಣ ಬೋಗಾರ ತಿಳಿಸಿದರು.

ADVERTISEMENT

ಪುರಸಭೆ ಉಪಾಧ್ಯಕ್ಷ ಅಜ್ಮೀರ್ ಬೆಳ್ಳಕಟ್, ಸದಸ್ಯರಾದ ಮಹೆಬೂಬ್ ಕಡ್ಡಪುಡಿ, ದುರಗಪ್ಪ ಕಟ್ಟಮನಿ, ಬಾಬು ಉಪ್ಪಾರ ಹಾಗೂ ತಸ್ಲಿಂ ಮುಲ್ಲಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.