ADVERTISEMENT

ರಾಯಚೂರು: ದಾಳಿಂಬೆ, ಹಸಿಮೆಣಸಿನಕಾಯಿಗೆ ವಿಮೆ, ಜೂನ್‌ 30 ಕೊನೆ ದಿನ

​ಪ್ರಜಾವಾಣಿ ವಾರ್ತೆ
Published 26 ಜೂನ್ 2020, 14:01 IST
Last Updated 26 ಜೂನ್ 2020, 14:01 IST

ರಾಯಚೂರು: ಮುಂಗಾರು ಹಂಗಾಮಿನಲ್ಲಿ ದಾಳಿಂಬೆ ಹಾಗೂ ಹಸಿಮೆಣಸಿನಕಾಯಿ (ನೀರಾವರಿ) ಬೆಳೆಗಳಿಗೆ ಮರುವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ತೋಟಗಾರಿಕೆ ಇಲಾಖೆಯಿಂದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ವಿಮೆ ಮಾಡಿಸಲು ಅಧಿಸೂಚನೆ ಹೊರಡಿಸಲಾಗಿದೆ.

ವಿಮಾ ಕಂತಿನೊಂದಿಗೆ ಅರ್ಜಿ ಸಲ್ಲಿಸಲು ಇದೇ ಜೂನ್‌ 30 ಕೊನೆಯ ದಿನ. ರೈತರು ವಿಮೆ ಮಾಡಿಸಲು ಹಾಗೂ ರೈತರು ಬೆಳೆಗಳ ವಿಮೆ ಮಾಡಿಸಿ, ಬೆಳೆ ವಿಮೆಯ ಸದುಪಯೋಗ ಪಡೆಯವಂತೆ ರಾಯಚೂರು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಮೊಹ್ಮದ ಅಲಿ ಕೋರಿದ್ದಾರೆ.

ಹಸಿ ಮೆಣಸಿನಕಾಯಿ ಬೆಳೆಗೆ ಪ್ರತಿ ಹೆಕ್ಟರ್ ವಿಮಾ ಕಂತಿನ ಮೊತ್ತ ₹3,550 ಇದೆ. ದಾಳಿಂಬೆ ಬೆಳೆಗೆ ಪ್ರತಿ ಹೆಕ್ಟರ್ ವಿಮಾ ಕಂತಿನ ಮೊತ್ತ ₹6,350 ಇರುತ್ತದೆ. ಹೆಚ್ಚುವರಿ ವಿಮಾ ಮೊತ್ತವನ್ನು ಸರ್ಕಾರದಿಂದ ಭರಿಸಲಾಗುವುದು.

ADVERTISEMENT

ಮುಂಗಾರು ಹಂಗಾಮಿನಲ್ಲಿ ರಾಯಚೂರು ಜಿಲ್ಲೆಯಲ್ಲಿ ಹಸಿ ಮೆಣಸಿನಕಾಯಿ (ನೀರಾವರಿ) ಮತ್ತು ದಾಳಿಂಬೆ ಬೆಳೆಗಳು ಯೋಜನೆಯ ವ್ಯಾಪ್ತಿಗೆ ಒಳಪಡುತ್ತವೆ.

ಬೆಳೆಸಾಲ ಪಡೆದಿರುವ ರೈತರು ಕಡ್ಡಾಯವಾಗಿ ವಿಮೆಗೆ ಒಳಪಡುತ್ತಾರೆ. ಬೆಳೆಸಾಲ ಪಡೆಯದಿದ್ದ ರೈತರು ಸ್ವ ಇಚ್ಚೆಯಿಂದ ಬೆಳೆ ವಿಮೆ ಮಾಡಿಸಬೇಕಿರುತ್ತದೆ. ಪಹಣಿ, ಬ್ಯಾಂಕ್ ಖಾತೆ ಪಾಸ್‌ಬುಕ್, ಆಧಾರ್ ಸಂಖ್ಯೆ ಮತ್ತು ಸ್ವಯಂ ಘೋಷಣೆ ಬೆಳೆ ದಾಖಲಾತಿಗಳೊಂದಿಗೆ ಬ್ಯಾಂಕ್‌ಗಳಲ್ಲಿ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಆಯಾ ತಾಲ್ಲೂಕು ತೋಟಗಾರಿಕೆ ಇಲಾಖೆ ಕಚೇರಿಗೆ ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.