ADVERTISEMENT

ಭೀಮನಗೌಡ ಪರ ಸಕಾರಾತ್ಮಕ ಸ್ಪಂದನೆ: ಬಸವಪ್ರಭು

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2021, 11:52 IST
Last Updated 14 ಏಪ್ರಿಲ್ 2021, 11:52 IST

ರಾಯಚೂರು: ‘ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ಸ್ಥಾನದಿಂದ ಪಲಗುಲ ನಾಗರಾಜ ನಾಮಪತ್ರ ಹಿಂಪಡೆದಿದ್ದು ಭೀಮನಗೌಡ ಇಟಗಿ ಅವರಿಗೆ ಬೆಂಬಲ ಸೂಚಿಸಲಿದ್ದಾರೆ. ಈಗಾಗಲೇ ಎಲ್ಲಾ ತಾಲ್ಲೂಕುಗಳಲ್ಲಿ ಪ್ರಚಾರ ಮಾಡುತ್ತಿದ್ದು ಭೀಮನಗೌಡ ಇಟಗಿ ಅವರ ಬೆಂಬಲ ಹೆಚ್ಚಾಗುತ್ತಿದ್ದು, ಸಕರಾತ್ಮಕವಾದ ಸ್ಪಂದನೆ ದೊರೆಯುತ್ತಿದೆ’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಲಿ ಅಧ್ಯಕ್ಷ ಡಾ.ಬಸವಪ್ರಭು ಪಾಟೀಲ ಬೆಟ್ಟದೂರು ಹೇಳಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಸಾಹಿತಿ ಪಲಗುಲ ನಾಗರಾಜ ಮಾತನಾಡಿ, ‘ಭೀಮನಗೌಡ ಇಟಗಿ ಅವರು ಅನೇಕ ವರ್ಷದಿಂದ ಪರಿಷತ್‌ನಲ್ಲಿ ಗುರುತಿಸಿಕೊಂಡು ಅನೇಕ ಸೇವೆ ಸಲ್ಲಿಸಿದ್ದಾರೆ. ಅವರು ಅಧ್ಯಕ್ಷರಾಗಬೇಕು. ನನ್ನ ಪತ್ನಿಯ ಅನಾರೋಗ್ಯ ಕಾರಣದಿಂದ ನಾಮಪತ್ರ ಹಿಂಪಡೆದಿದ್ದೇನೆ. ಮುಂದಿನ ದಿನಗಳಲ್ಲಿ ಅವಕಾಶ ದೊರೆತರೆ ಸ್ಪರ್ಧೆ ಮಾಡುತ್ತೇನೆ’ ಎಂದರು.

'ಕನ್ನಡ ಸಾಹಿತ್ಯದ ಅಧ್ಯಕ್ಷರಾಗುವವರು ಮುಂದೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರ ಆಯ್ಕೆಗೆ ತಾಲ್ಲೂಕು ಅಧ್ಯಕ್ಷರೇ ನೇಮಕ ಮಾಡುವ ಹಕ್ಕು ನೀಡಬೇಕು. ಜಿಲ್ಲಾ ಘಟಕ ಪ್ರತ್ಯೇಕವಾಗಿ ಕೆಲಸ ಮಾಡಬೇಕು' ಎಂದು ಒತ್ತಾಯಿಸಿದರು.

ADVERTISEMENT

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷದ ಆಕಾಂಕ್ಷಿ ಭೀಮನಗೌಡ ಇಟಗಿ, ಜೆ.ಎಲ್.ಈರಣ್ಣ, ಸುರೇಶ ಕುರ್ಡಿ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.