ADVERTISEMENT

ಗಬ್ಬೂರು: ನಾಡ ತಹಶೀಲ್ದಾರ್ ಕಚೇರಿಯಲ್ಲಿ ಬೆಂಕಿ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2025, 7:05 IST
Last Updated 2 ಆಗಸ್ಟ್ 2025, 7:05 IST
ದೇವದುರ್ಗ ತಾಲ್ಲೂಕಿನ ಗಬ್ಬೂರು ನಾಡ ತಹಶೀಲ್ದಾರ್ ಕಚೇರಿಯಲ್ಲಿ ಶಾರ್ಟ್ ಸರ್ಕಿಟ್‌ನಿಂದ ಕಂಪ್ಯೂಟರ್‌ ಭಸ್ಮವಾಗಿರುವುದು
ದೇವದುರ್ಗ ತಾಲ್ಲೂಕಿನ ಗಬ್ಬೂರು ನಾಡ ತಹಶೀಲ್ದಾರ್ ಕಚೇರಿಯಲ್ಲಿ ಶಾರ್ಟ್ ಸರ್ಕಿಟ್‌ನಿಂದ ಕಂಪ್ಯೂಟರ್‌ ಭಸ್ಮವಾಗಿರುವುದು   

ದೇವದುರ್ಗ: ತಾಲ್ಲೂಕಿನ ಗಬ್ಬೂರು ನಾಡ ತಹಶೀಲ್ದಾರ್ ಕಚೇರಿಯಲ್ಲಿ ಶಾರ್ಟ್ ಸರ್ಕಿಟ್‌ನಿಂದ ಗುರುವಾರ ರಾತ್ರಿ ಬೆಂಕಿ ಹೊತ್ತಿಕೊಂಡು ಮಹತ್ವದ ದಾಖಲೆಗಳು, ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ.

ತಡರಾತ್ರಿ ಅಗ್ನಿ ಅವಘಡ ನಡೆದಿದ್ದು ಕಂಪ್ಯೂಟರ್, ಸಾರ್ವಜನಿಕರ ಮಹತ್ವದ ದಾಖಲೆಗಳು, ಪೀಠೋಪಕರಣಗಳು ಸುಟ್ಟು ಕರಕಲಾಗಿವೆ. ಮಳೆಯಿಂದ ಹಳೆಯ ಕಟ್ಟಡದ ಗೋಡೆಗಳು ಒದ್ದೆಯಾಗಿದ್ದು ಅಲ್ಲಲ್ಲಿ ಸೋರಿದ್ದರಿಂದ ಶಾರ್ಟ್ ಸರ್ಕಿಟ್ ಉಂಟಾಗಿದೆ. ಇನ್ವರ್ಟರ್‌ಲ್ಲಿ ಬೆಂಕಿ ಕಾಣಿಸಿಕೊಂಡು ಸ್ಫೋಟಗೊಂಡಿದೆ.

ಎರಡನೇ ಬಾರಿ ನಾಡ ತಹಶಿಲ್ದಾರ್ ಕಚೇರಿ ಅಗ್ನಿದುರಂತಕ್ಕೆ ಈಡಾಗಿದೆ. ಮಹತ್ವದ ದಾಖಲೆಗಳು ಸುಟ್ಟು ಹೋಗಿರುವುದರಿಂದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗಬ್ಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.