ಹಟ್ಟಿ ಚಿನ್ನದಗಣಿ: ಕೃಷ್ಣಾ ನದಿಗೆ ನೀರು ಹರಿ ಬಿಡಲಾಗಿದ್ದು, ಟಣಮಕಲ್ಲು, ಹಾಗೂ ಗದ್ದಿಗಿ ತಾಂಡ ನಡುಗಡ್ಡೆ ಗ್ರಾಮಗಳಲ್ಲಿ ಜಮೀನಿಗೆ ನೀರು ನುಗ್ಗಿದ ಪರಿಣಾಮ, ರೈತರ ಬೆಳೆಗಳು ಮುಳುಗಿ ಹೋಗಿದ್ದು ಅನ್ನದಾತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ರೈತರ ಜಮೀನಿಗೆ ನೀರು ನುಗಿದ್ದು ಹತ್ತಿ, ತೊಗರಿ, ಸಜ್ಜೆ ಬೆಳೆಗಳು ನೀರು ಪಾಲಾಗಿವೆ. ಪ್ರವಾಹ ಬಂದಾಗಲೆಲ್ಲ ರೈತರು ಇದೆ ಸಮಸ್ಯೆ ಎದುರಿಸುತ್ತಿದ್ದಾರೆ. ರೈತರಿಗೆ ಬೆಳೆ ಪರಿಹಾರ ನೀಡಬೇಕು ಎಂದು ರೈತ ವೆಂಕಟೇಶ ನಾಯಕ ದೊರೆ ಒತ್ತಾಯಿಸಿದ್ದಾರೆ.
ಟಣಮಕಲ್ಲು ಹತ್ತಿರದ ಸೇತುವೆ ಮುಳುಗುವ ಭೀತಿ ಇದೆ. ಈ ಸೇತುವೆ ಮೂಲಕ ಹಲವು ರೈತರು ತಮ್ಮ ಜಮೀನಿಗೆ ತೆರಳುತ್ತಾರೆ. ಈಗ ಪ್ರವಾಹ ಹೆಚ್ಚಾಗಿದ್ದು ಸೇತುವೆ ಮುಳುಗಿದರೆ ರಸ್ತೆ ಸಂಪೂರ್ಣ ಬಂದ್ ಆಗಲಿದೆ. ಜನಪ್ರತಿನಿಧಿಗಳಿಗೆ ಸೇತುವೆಯನ್ನು ಎತ್ತರಕ್ಕೆ ನಿರ್ಮಾಣ ಮಾಡಿ ಎಂದು ತಿಳಿಸಿದರೂ ಸಮಸ್ಯೆ ಬಗೆಹರಿಸುತ್ತಿಲ್ಲ. ಅಧಿಕಾರಿಗಳು ನೆರೆಹಾವಳಿ ಬಂದಾಗ ಮಾತ್ರ ಇತ್ತ ಕಡೆ ಗಮನಹಿಸುತ್ತಾರೆ. ನಮ್ಮ ಸಮಸ್ಯೆ ಬಗೆಹರಿಸಿ ಎಂದು ಈ ಭಾಗದ ರೈತರ ಆಗ್ರಹವಾಗಿದೆ.
ತಾಲ್ಲೂಕ ಆಡಳಿತ ಅಧಿಕಾರಿಗಳು ಪ್ರವಾಹ ಬಂದಾಗ ಮಾತ್ರ ಇತ್ತ ಕಡೆ ಗಮನಹರಿಸುತ್ತಾರೆ. ಜನರ ಸಮಸ್ಯೆ ಬಗೆಹರಿಸುವಲ್ಲಿ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ. ರೈತರ ನೊವು ಅಧಿಕಾರಿಗಳಿಗೆ ತಿಳಿಯುವುದಿಲ್ಲ. ಟಣಮಕಲ್ಲು ಸೇತುವೆ ದುರಸ್ತಿ ಮಾಡಲು ಮನವಿ ಮಾಡಿದರು, ಇತ್ತ ಕಡೆ ಅಧಿಕಾರಿಗಳು ಗಮನಹರಿಸುತ್ತಿಲ್ಲ ಎನ್ನುತ್ತಾರೆ ಟಣಮಕಲ್ಲು ಗ್ರಾಮಸ್ಧರು.
ಜಮೀನಿಗೆ ನೀರು ಬಂದಿದ್ದರಿಂದ ಬೆಳೆಗಳು ನೀರಿನಲ್ಲಿ ಮುಳುಗಿ ಹೋಗಿವೆ, ಸಾವಿರಾರೂ ರೂ.ಖಚು ೯ ಮಾಡಿ ಬಿತ್ತನೆ ಮಾಡಿದ್ದು ಈಗ ಬೆಳೆ ಕೈಗೆ ಬರುವ ಸಮಯದಲ್ಲಿ ನದಿ ಪ್ರವಾಹಕ್ಕೆ ಸಿಲುಕಿ ಬೆಳೆಗಳು ಹಾನಿಯಾಗಿವೆ ಎನ್ನುತ್ತಾರ ನಡುಗಡ್ಡೆ ರೈತ ಬಸಪ್ಪ.
ಸಂಬಂಧಪಟ್ಟ ಅಧಿಕಾರಿಗಳು ಇತ್ತ ಕಡೆ ಗಮನಹರಿಸಿ ರೈತರ ನೆರವಿಗೆ ದಾವಿಸಿ ಸಮಸ್ಯೆ ಬಗೆಹರಿಸಬೇಕೆಂದು ಈಭಾಗದ ರೈತರ ಆಗ್ರಹವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.