ADVERTISEMENT

ಸಿಂಧನೂರು: ಒಳಮೀಸಲಾತಿಗೆ ವಿವಿಧ ಸಮುದಾಯಗಳ ವಿರೋಧ, ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2025, 5:00 IST
Last Updated 20 ಸೆಪ್ಟೆಂಬರ್ 2025, 5:00 IST
<div class="paragraphs"><p>ಸಿಂಧನೂರಿನ ಬಂಜಾರ, ಭೋವಿ, ಕೊರಮ, ಕೊರಚ ಮೀಸಲಾತಿ ಒಕ್ಕೂಟದಿಂದ ಅವೈಜ್ಞಾನಿಕ ಒಳ ಮೀಸಲಾತಿ ವಿರೋಧಿಸಿ ಶುಕ್ರವಾರ ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.</p></div>

ಸಿಂಧನೂರಿನ ಬಂಜಾರ, ಭೋವಿ, ಕೊರಮ, ಕೊರಚ ಮೀಸಲಾತಿ ಒಕ್ಕೂಟದಿಂದ ಅವೈಜ್ಞಾನಿಕ ಒಳ ಮೀಸಲಾತಿ ವಿರೋಧಿಸಿ ಶುಕ್ರವಾರ ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

   

ಸಿಂಧನೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಅವೈಜ್ಞಾನಿಕ ಒಳ ಮೀಸಲಾತಿ ಹಂಚಿಕೆ ಮಾಡಿದೆ ಎಂದು ಆರೋಪಿಸಿ ಬಂಜಾರ, ಭೋವಿ, ಕೊರಮ, ಕೊರಚ ಮೀಸಲಾತಿ ಒಕ್ಕೂಟದಿಂದ ಶುಕ್ರವಾರ ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ಸ್ಥಳೀಯ ಎಪಿಎಂಸಿ ಗಣೇಶ ದೇವಸ್ಥಾನದ ಬಳಿ ಬೆಳಿಗ್ಗೆಯಿಂದಲೇ ನಗರ ಸೇರಿದಂತೆ ಹಳ್ಳಿ ಮತ್ತು ಕ್ಯಾಂಪ್‍ಗಳಿಂದ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಸಮಾಜದ ಮುಖಂಡರು ಮುಖಂಡರು, ಮಹಿಳೆಯರು ಭಾಜಾ ಭಜಂತ್ರಿ ಮೂಲಕ ಬಾಬು ಜಗಜೀವನರಾಮ್ ವೃತ್ತ, ಬಸವೇಶ್ವರ ವೃತ್ತ, ಬಸ್ ನಿಲ್ದಾಣ ರಸ್ತೆ ಮೂಲಕ ಮಹಾತ್ಮ ಗಾಂಧಿ ಸರ್ಕಲ್‍ಗೆ ಬಂದು ಮಾನವ ಸರಪಳಿ ನಿರ್ಮಿಸಿ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಈಗಿನ ಕಾಂಗ್ರೆಸ್ ಸರ್ಕಾರ ಹಿಂದಿನ ಮಾಧುಸ್ವಾಮಿಯವರ ಉಪಸಮಿತಿಯ ಶಿಫಾರಸುಗಳನ್ನು ಕೈಬಿಟ್ಟು ನ್ಯಾ.ನಾಗಮೋಹನದಾಸ್ ನೇತೃತ್ವದ ಸಮಿತಿಯನ್ನು ರಚನೆ ಮಾಡಿತ್ತು. ನಂತರ ಈ ಸಮಿತಿಯ ಶಿಫಾರಸುಗಳನ್ನು ಕೈಬಿಟ್ಟು ಸಚಿವ ಸಂಪುಟ ಸಮಿತಿಯಲ್ಲಿ ಎರಡು ಪ್ರವರ್ಗಗಳ ಗುಂಪುಗಳನ್ನು ಒಗ್ಗೂಡಿಸಿ ಶೇ 5ರಷ್ಟು ಮೀಸಲಾತಿ ನೀಡಿರುವುದು ನಾಲ್ಕು ಸಮುದಾಯಕ್ಕೆ ಮಾಡಿರುವ ಘೋರ ಅನ್ಯಾಯವಾಗಿದೆ’ ಎಂದು ಭೋವಿ ಸಮಾಜದ ತಾಲ್ಲೂಕು ಘಟಕದ ಮುಖಂಡ ವೀರೇಶ ಸಿದ್ರಾಂಪುರ ಆರೋಪಿಸಿದರು.

‘ರಾಜ್ಯ ಸರ್ಕಾರ ಬಂಜಾರ, ಭೋವಿ, ಕೊರಮ, ಕೊರಚ ಜೊತೆಗೆ ಅಲೆಮಾರಿ ಸಮುದಾಯದ 59 ಜಾತಿಗಳನ್ನು ಒಗ್ಗೂಟಿಸಿ ಒಟ್ಟಾರೆ 63 ಜಾತಿಗಳಿಗೆ ಕೇವಲ ಶೇ 5 ರಷ್ಟು ಮೀಸಲಾತಿ ನೀಡಿ ಸ್ಪೃಶ್ಯ ಜಾತಿಗಳು ಎಂದು ಹಣೆಪಟ್ಟಿ ಕಟ್ಟಿರುವುದು ಅಸಂವಿಧಾನಿಕವಾಗಿದೆ’ ಎಂದು ಕುಳುವ ಮಹಾಸಂಘದ ಅಧ್ಯಕ್ಷ ರಾಮಕೃಷ್ಣ ಭಜಂತ್ರಿ ದೂರಿದರು.

ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಬಂಜಾರ ಸಮಾಜದ ಮುಖಂಡ ಅಮರೇಶ ರೈತನಗರ ಕ್ಯಾಂಪ್, ಒಕ್ಕೂಟದ ಮುಖಂಡರಾದ ಗೋವಿಂದರಾಜ ಸೋಮಲಾಪುರ, ಲಕ್ಷ್ಮಣ ಭೋವಿ, ಶರಣಬಸವ ಉಮಲೂಟಿ, ಸುರೇಶ ಜಾದವ್, ಲಾಲಪ್ಪ ರಾಠೋಡ್ ಲಿಂಗಸುಗೂರು, ಹನುಮಂತ ಹಂಚಿನಾಳ, ರವಿ ಚವ್ಹಾಣ್, ಹೊಳೆಯಪ್ಪ, ಶ್ರೀನಿವಾಸ ಮೇಸ್ತ್ರಿ, ಕೃಷ್ಣಕುಮಾರಿ
ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.