ADVERTISEMENT

ರಾಜ್ಯದ ಜನರು ಬೆಳಕಿನಲ್ಲಿ ಇರಬೇಕು: ಆರ್‌ಟಿಪಿಎಸ್‌ ಕಾರ್ಮಿಕರ ಮನದಾಳ

ಉಮಾಪತಿ ಬಿ.ರಾಮೋಜಿ
Published 30 ಏಪ್ರಿಲ್ 2020, 19:45 IST
Last Updated 30 ಏಪ್ರಿಲ್ 2020, 19:45 IST
ಶಕ್ತಿನಗರದ ಆರ್‌ಟಿಪಿಎಸ್‌ ಕಲ್ಲಿದ್ದಲು ವಿಭಾಗದಲ್ಲಿ ಸ್ವಚ್ಛತೆ ಮಾಡುತ್ತಿರುವ ಗುತ್ತಿಗೆ ಕಾರ್ಮಿಕ
ಶಕ್ತಿನಗರದ ಆರ್‌ಟಿಪಿಎಸ್‌ ಕಲ್ಲಿದ್ದಲು ವಿಭಾಗದಲ್ಲಿ ಸ್ವಚ್ಛತೆ ಮಾಡುತ್ತಿರುವ ಗುತ್ತಿಗೆ ಕಾರ್ಮಿಕ   

ಶಕ್ತಿನಗರ: ದೇಶದಲ್ಲಿ ಲಾಕ್‌ಡೌನ್‌ ಘೋಷಿಸಿದ್ದರೂ ವಿದ್ಯುತ್‌ ಉತ್ಪಾದನೆಗೆ ಬಿಡುವು ಇರಲಿಲ್ಲ. ರಾಯಚೂರು ಶಾಖೋತ್ಪನ್ನ ವಿದ್ಯುತ್‌ ಸ್ಥಾವರ (ಆರ್‌ಟಿಪಿಎಸ್‌) ಕಲ್ಲಿದ್ದಲು ಘಟಕದಲ್ಲಿ ದುಡಿಯುತ್ತಿರುವ ಸುರೇಶ ಅವರು ‘ಕಾರ್ಮಿಕರ ದಿನಾಚರಣೆ’ ನಿಮಿತ್ತ ಕಾಯಕದ ಬಗ್ಗೆ ಹಂಚಿಕೊಂಡರು.

‘ದೇಶದಲ್ಲಿ ಲಾಕ್‌ಡೌನ್‌ ಇದ್ದ ಪರಿಣಾಮ ಜನರಲ್‌ ಶಿಫ್ಟ್‌ ಪಾಳಿಯ ನೌಕರರು ಶೇ 50 ರಷ್ಟು ಮಾತ್ರ ಕೆಲಸ ಮಾಡುವುದಕ್ಕೆ ಅವಕಾಶ ನೀಡಲಾಗಿತ್ತು. ಮೂರು ಪಾಳಿಗಳಲ್ಲಿ ಕೆಲಸ ಮಾಡುವುದಕ್ಕೆ ಯಾವುದೇ ತೊಂದರೆ ಆಗಲಿಲ್ಲ. ಇಂಥ ಸಮಯದಲ್ಲಿ ಜನರಿಗೆ ಅಗತ್ಯ ವಿದ್ಯುತ್ ಬೇಡಿಕೆಯನ್ನು ಪೂರೈಕೆ ಮಾಡುವ ಕೇಂದ್ರದಲ್ಲಿ ಇರುವುದು ಖುಷಿ ಕೊಟ್ಟಿದೆ’ ಎಂದರು.

ಟರ್ಬನ್, ಕಲ್ಲಿದ್ದಲು ವಿಭಾಗ ಸೇರಿದಂತೆ ಆರ್‌ಟಿಪಿಎಸ್‌ ವಿವಿಧ ಕಡೆ 1,320 ಗುತ್ತಿಗೆ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಕೊರೊನಾ ಸೋಂಕು ಹರಡದಂತೆ ಎಲ್ಲರಿಗೂ ಮಾಸ್ಕ್ ಮತ್ತು ಸ್ಯಾನಿಟೈಜರ್‌ ಹಾಗೂ ಇತರೆ ಸುರಕ್ಷತಾ ಸಲಕರಣೆಗಳನ್ನು ನೀಡಲಾಗಿದೆ. ವಿದ್ಯುತ್ ಘಟಕಗಳ ಉತ್ಪಾದನೆಗೆ ತೊಂದರೆ ಆಗದಂತೆ ತಮ್ಮ ಜೀವವನ್ನೇ ಲೆಕ್ಕಿಸದೆ, ಸೈನಿಕರಂತೆಯೇ ಗುತ್ತಿಗೆ ಕಾರ್ಮಿಕರು ಶ್ರಮಿಸುತ್ತಿದ್ದಾರೆ.

ADVERTISEMENT

‘ನಮ್ಮ ಬದುಕಿನಲ್ಲಿ ಕತ್ತಲೆ ಇದ್ದರೂ ಚಿಂತೆಯಿಲ್ಲ, ರಾಜ್ಯದ ಜನರಿಗೆ ಬೆಳಕು ಸಿಗಬೇಕು. ನಿಗದಿತ ವೇಳೆಗೆ ಸಂಬಳ ನೀಡಿದಿದ್ದಾಗ, ಕುಟುಂಬದ ಜೀವನೋಪಾಯಕ್ಕೆ ಅನಾನುಕೂಲ ಆಗುತ್ತದೆ. ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತುಗೊಂಡು ಸಮಯಕ್ಕೆ ಸರಿಯಾಗಿ ವೇತನ ನೀಡಬೇಕು’ ಎಂದು ಕೋರಿಕೆ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.