ಲಿಂಗಸುಗೂರು: ಪಟ್ಟಣದ ಎಪಿಎಂಸಿಯಲ್ಲಿ ತೊಗರಿ ಖರೀದಿ ಕೇಂದ್ರಕ್ಕೆ ಬುಧವಾರ ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರುಕಟ್ಟೆ ಸಮಿತಿ ಅಧ್ಯಕ್ಷ ಶಶಿಧರಗೌಡ ಪಾಟೀಲ ಆಶಿಹಾಳ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಪ್ರತಿಯೊಬ್ಬ ರೈತರಿಂದ ಎಕರೆಗೆ ನಾಲ್ಕು ಕ್ವಿಂಟಲ್‌ನಂತೆ ಗರಿಷ್ಠ 40 ಕ್ವಿಂಟಲ್‌ವರೆಗೆ ತೊಗರಿ ಖರೀದಿ ಮಾಡಲಾಗುತ್ತದೆ. ಖರೀದಿ ಕೇಂದ್ರದಲ್ಲಿ ರೈತರಿಗೆ ಅನ್ಯಾಯ ಆಗದಂತೆ ಯಾವುದೇ ಸೂಟ್ ಕಡಿತ, ಕಮಿಷನ್ ಇರುವುದಿಲ್ಲ. ಚೀಲದ ತೂಕ ಮಾತ್ರ ಕಡಿತ ಮಾಡಲಾಗುತ್ತಿದೆ. ಈಗಾಗಲೇ 252 ರೈತರು ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಂಡಿದ್ದಾರೆ.ಉಳಿದ ರೈತರ ನೋಂದಣಿ ಮಾಡಿಕೊಳ್ಳಬೇಕು. ನಾಳೆಯಿಂದಲೇ ಖರೀದಿ ಆರಂಭ ಮಾಡಲಾಗುವುದು. ರೈತ ಸಂಪರ್ಕ ಕೇಂದ್ರದಿಂದ ಜಿಪಿಎಸ್ ಮಾಡಿದ ರೈತರ ತೊಗರಿ ಖರೀದಿಸಲಾಗುತ್ತಿದೆ. ಕೇಂದ್ರ ಸರ್ಕಾರದ ₹ 7,550 ಹಾಗೂ ರಾಜ್ಯ ಸರ್ಕಾರದ ₹ 450 ಒಟ್ಟು ಸೇರಿ ₹ 8000ಗೆ ಒಂದು ಕ್ವಿಂಟಲ್ ತೊಗರಿ ಖರೀದಿಸಲಾಗುತ್ತಿದೆ. ಸುಗಮ ಖರೀದಿಗಾಗಿ ರೈತರು ಖರೀದಿ ಕೇಂದ್ರದ ಸಿಬ್ಬಂದಿಯೊಂದಿಗೆ ಸಹಕಾರ ನೀಡಬೇಕು ಎಂದು ಹೇಳಿದರು.
ಎಪಿಎಂಸಿ ಅಧ್ಯಕ್ಷ ಅಮರೇಶ ಹೆಸರೂರು, ಕಾರ್ಯದರ್ಶಿ ರಂಗನಾಥ ದೇಸಾಯಿ, ನಿರ್ದೇಶಕರಾದ ಮಹದೇವಯ್ಯ ಗೌಡೂರ, ಶರಣಗೌಡ ಮಾಲಿಪಾಟೀಲ, ರುದ್ರಗೌಡ ಪಾಟೀಲ, ರೈತರಾದ ಶಿವು ಗ್ಯಾನಪ್ಪ ಐದನಾಳ, ಹನುಮಂತಪ್ಪ ಹೀರೆ ದಿನ್ನಿ, ಶಿವಪ್ಪ ಹುನಕುಂಟಿ ಶರಣಪ್ಪ, ಬಸವರಾಜ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.