ADVERTISEMENT

ಲಿಂಗಸುಗೂರು: ಸಾಲಮರದ ತಿಮ್ಮಕ್ಕ ವೃಕ್ಷ್ಯೋದ್ಯಾನ ನಿರ್ಮಾಣಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2025, 7:10 IST
Last Updated 15 ಡಿಸೆಂಬರ್ 2025, 7:10 IST
ಲಿಂಗಸುಗೂರು ಹುಲಿಗುಡ್ಡ ಹೊರವಲಯ ಅರಣ್ಯ ಇಲಾಖೆ ಭೂಮಿಯಲ್ಲಿ ಸಾಲಮರದ ತಿಮ್ಮಕ್ಕ ಉದ್ಯಾನವನಕ್ಕೆ ಶಾಸಕ ಮಾನಪ್ಪ ವಜ್ಜಲ್ ಹಾಗೂ ವಿಧಾನಪರಿಷತ್ ಸದಸ್ಯ ಶರಣಗೌಡ ಬಯ್ಯಾಪುರ ಜಂಟಿಯಾಗಿ ಚಾಲನೆ ನೀಡಿದರು 
ಲಿಂಗಸುಗೂರು ಹುಲಿಗುಡ್ಡ ಹೊರವಲಯ ಅರಣ್ಯ ಇಲಾಖೆ ಭೂಮಿಯಲ್ಲಿ ಸಾಲಮರದ ತಿಮ್ಮಕ್ಕ ಉದ್ಯಾನವನಕ್ಕೆ ಶಾಸಕ ಮಾನಪ್ಪ ವಜ್ಜಲ್ ಹಾಗೂ ವಿಧಾನಪರಿಷತ್ ಸದಸ್ಯ ಶರಣಗೌಡ ಬಯ್ಯಾಪುರ ಜಂಟಿಯಾಗಿ ಚಾಲನೆ ನೀಡಿದರು    

ಲಿಂಗಸುಗೂರು: ಪಟ್ಟಣದಲ್ಲಿ 26 ಎಕರೆ ಪ್ರದೇಶದಲ್ಲಿ ಸಾಲಮರದ ತಿಮ್ಮಕ್ಕ ವೃಕ್ಷ್ಯೋದ್ಯಾನ ನಿರ್ಮಾಣಕ್ಕೆ ಶಾಸಕ ಮಾನಪ್ಪ ವಜ್ಜಲ್ ಹಾಗೂ ವಿಧಾನಪರಿಷತ್ ಸದಸ್ಯ ಶರಣಗೌಡ ಬಯ್ಯಾಪುರ ಜಂಟಿಯಾಗಿ ಚಾಲನೆ ನೀಡಿದರು.

ಪಟ್ಟಣದ ಹುಲಿಗುಡ್ಡ ಹೊರವಲಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹತ್ತಿರದಲ್ಲಿ ಎರಡು ಕೋಟಿ ವೆಚ್ಚದಲ್ಲಿ ಹೊಸ ವೃಕ್ಷ್ಯೋದ್ಯಾನ ನಿರ್ಮಾಣಕ್ಕಾಗಿ ಗುರುವಾರ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಎಂಎಲ್‌ಸಿ ಶರಣಗೌಡ ಬಯ್ಯಾಪುರ, ‘ಇಲ್ಲಿ 47 ಎಕರೆ ಅರಣ್ಯ ಇಲಾಖೆ ಭೂಮಿ ಇದೆ. ಇದರಲ್ಲಿ 26 ಎಕರೆ ಭೂಮಿಯಲ್ಲಿ ಸಾಲುಮರದ ತಿಮ್ಮಕ್ಕನ ಹೆಸರಿನಲ್ಲಿ ವೃಕ್ಷ್ಯೋದ್ಯಾನ ನಿರ್ಮಾಣಕ್ಕೆ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರಿಗೆ ಮನವಿ ಮಾಡಿದ್ದರಿಂದ ಅವರು ಕೂಡಲೇ ಸ್ಪಂದಿಸಿ ಎರಡು ಕೋಟಿ ಅನುದಾನ ನೀಡುವುದಾಗಿ ಭರವಸೆ ನೀಡಿದ್ದಾರೆ. ಅದರ ಪ್ರಥಮ ಹಂತದಲ್ಲಿ ₹80 ಲಕ್ಷ ಬಿಡುಗಡೆಗೊಳಿಸಿದ್ದಾರೆ. ಅದರ ಕಾಮಗಾರಿಗೆ ಚಾಲನೆ ನೀಡಲಾಗಿದೆ’ ಎಂದರು.

ಶಾಸಕ ಮಾನಪ್ಪ ವಜ್ಜಲ್ ಮಾತನಾಡಿ, ‘ವೃಕ್ಷ್ಯೋದ್ಯಾನ ಆದರೆ ಸಾಲದು ಇದರಲ್ಲಿ ಈಜುಕೊಳ, ಮಕ್ಕಳ ಉದ್ಯಾನವನ ಸೇರಿದಂತೆ ಇನ್ನಿತರ ಸೌಲಭ್ಯಕ್ಕಾಗಿ ಕೆಕೆಆರ್‌ಡಿಬಿಯಿಂದ ಅನುದಾನ ಒದಗಿಸುವೆ. ಇದೊಂದು ದೊಡ್ಡ ಹಾಗೂ ಮಾದರಿ ಉದ್ಯಾನವನ ಆಗಲಿದೆ. ಇದರಿಂದ ವಾಯುವಿಹಾರ ಹಾಗೂ ಮನರಂಜನೆಗಾಗಿ ಸಾರ್ವಜನಿಕರಿಗೆ ಅನುಕೂಲವಾಗಲಿದೆ’ ಎಂದರು.

ADVERTISEMENT

ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಭೂಪನಗೌಡ ಕರಡಕಲ್, ಮುಖಂಡರಾದ ಶರಣಪ್ಪ ಮೇಟಿ, ಗಿರಿಮಲ್ಲನಗೌಡ ಕರಡಕಲ್, ಗುಂಡಪ್ಪ ನಾಯಕ, ಡಿ.ಜಿ.ಗುರಿಕಾರ, ಬಸವರಾಜಗೌಡ ಗಣೇಕಲ್, ಶಶಿಧರಗೌಡ ಆಶಿಹಾಳ, ಬಿಜೆಪಿ ಮಂಡಲ ಅಧ್ಯಕ್ಷ ಕೆ.ನಾಗಭೂಷಣ, ಅನೀಸ್ ಪಾಶಾ, ಆರ್‌ಎಫ್‌ಒ ಸುಭಾಶಚಂದ್ರ ನಾಯಕ ಹಾಗೂ ಇನ್ನಿತರರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.