ಲಿಂಗಸುಗೂರು (ರಾಯಚೂರು ಜಿಲ್ಲೆ): ಪಟ್ಟಣದ ಬಸವಸಾಗರ ವೃತ್ತ ಬಳಿಯ ಖಾಸಗಿ ಆಸ್ಪತ್ರೆ ಕಟ್ಟಡದ ಮೇಲಿಂದ ಜಿಗಿಯಲು ಯತ್ನಿಸಿದ ಯುವಕನನ್ನು ಸೋಮವಾರ ಸ್ಥಳೀಯರ ರಕ್ಷಣೆ ಮಾಡಿದ್ದಾರೆ
ಕಟ್ಟಡ ಮೇಲಿಂದ ಜಿಗಿಯಲು ಯತ್ನಿಸಿದ ಯುವಕನನ್ನು ಜಾವೀದ್ ಪಾಷಾ ಮುದಗಲ್ ಪಟ್ಟಣದ ನಿವಾಸಿಯಾಗಿದ್ದಾನೆ. ಮೂರು ದಿನಗಳ ಹಿಂದೆ ಪಟ್ಟಣದ ಖಾಸಗಿ ಆಸ್ಪತ್ರೆಗೆ
ಚಿಕಿತ್ಸೆ ಬಂದಿದ್ದ. ಆದರೆ ಆಸ್ಪತ್ರೆಯ ಎರಡು ಅಂತಸ್ತಿನ ಕಟ್ಟಡದ ಮೇಲೆ ಏರಿ ಕಟ್ಟಡದ ತುದಿಗೆ ನಿಂತು ಕೆಳಗೆ ಜಿಗಿದು ಸಾಯುವುದಾಗಿ ಜೋರಾಗಿ ಕೂಗುತ್ತಿದ್ದ. ಆಸ್ಪತ್ರೆ ಸಿಬ್ಬಂದಿ ಎಚ್ಚತ್ತೆಗೊಂಡು ಸ್ಥಳೀಯರ ನೆರವಿನಿಂದ ಯುವಕನ ರಕ್ಷಣೆ ಮಾಡಿದ್ದಾರೆ.
ಕಟ್ಟಡವೇರಿ ಯುವಕ ಹೈಡ್ರಾಮಾ ಮಾಡುತ್ತಿದ್ದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಲಿಂಗಸುಗೂರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.