ADVERTISEMENT

ಲಿಂಗಸುಗೂರು: ಖಾಸಗಿ ಶಾಲೆಗಳ ವಿರುದ್ಧ ಕ್ರಮಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 9 ಜುಲೈ 2025, 7:10 IST
Last Updated 9 ಜುಲೈ 2025, 7:10 IST
<div class="paragraphs"><p>ಲಿಂಗಸುಗೂರು ತಾಲ್ಲೂಕಿನ ಖಾಸಗಿ ಶಿಕ್ಷಣ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಜರಗಿಸುವಂತೆ ಆಗ್ರಹಿಸಿ ನಮ್ಮ ಕರ್ನಾಟಕ ಸೇನೆ ಪದಾಧಿಕಾರಿಗಳು ಬಿಇಒ ಕಚೇರಿ ಸಿಬ್ಬಂದಿಗೆ ಮನವಿ ಸಲ್ಲಿಸಿದರು</p></div>

ಲಿಂಗಸುಗೂರು ತಾಲ್ಲೂಕಿನ ಖಾಸಗಿ ಶಿಕ್ಷಣ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಜರಗಿಸುವಂತೆ ಆಗ್ರಹಿಸಿ ನಮ್ಮ ಕರ್ನಾಟಕ ಸೇನೆ ಪದಾಧಿಕಾರಿಗಳು ಬಿಇಒ ಕಚೇರಿ ಸಿಬ್ಬಂದಿಗೆ ಮನವಿ ಸಲ್ಲಿಸಿದರು

   

ಲಿಂಗಸುಗೂರು: ‘ತಾವು ಸೂಚಿಸಿದ ಅಂಗಡಿಗಳಲ್ಲಿ ಸಮವಸ್ತ್ರ, ಪಠ್ಯಪುಸ್ತಕ ಖರೀದಿಸಬೇಕು ಎಂದು ಅಲಿಖಿತ ಆದೇಶ ಮಾಡುತ್ತಿರುವ ಖಾಸಗಿ ಶಾಲೆಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿ ನಮ್ಮ ಕರ್ನಾಟಕ ಸೇನೆ ಪದಾಧಿಕಾರಿಗಳು ಮಂಗಳವಾರ ಬಿಇಒಗೆ ಮನವಿ ಸಲ್ಲಿಸಿದರು.

‘ಪಟ್ಟಣ ಸೇರಿ ತಾಲ್ಲೂಕಿನಾದ್ಯಂತ ಖಾಸಗಿ ಶಾಲೆಗಳು ಮನಬಂದಂತೆ ಡೊನೆಶನ್ ಪಡೆಯುತ್ತಿದ್ದು, ಶಿಕ್ಷಣ ಸಂಸ್ಥೆಯವರು ಸೂಚಿಸಿದ ಅಂಗಡಿಯಲ್ಲಿ ಮಕ್ಕಳ ಶಾಲಾ ಸಮವಸ್ತ್ರ ಖರೀದಿಸಬೇಕು. ಒಂದು ವೇಳೆ ಖರೀದಿಸದಿದ್ದರೆ ಮಕ್ಕಳಿಗೆ ತೊಂದರೆ ನೀಡುವ ಪರಿಪಾಠ ಬೆಳೆದುಬಂದಿದೆ’ ಎಂದು ದೂರಿದರು.

ADVERTISEMENT

‘ಕೆಲವು ಶಾಲೆಗಳಲ್ಲಿ ತಮ್ಮ ಶಾಲೆಯ ಲೋಗೊ ಹಾಕಿ ತಾವೇ ನೋಟ್‌ಬುಕ್‌ ಮಾರಾಟ ಮಾಡುತ್ತಿದ್ದಾರೆ. ಶಿಕ್ಷಣ ಸೇವಾ ಕ್ಷೇತ್ರವಾಗಿದ್ದರೂ ಸಂಸ್ಥೆಯವರು ವ್ಯಾಪಾರ ಕ್ಷೇತ್ರವನ್ನಾಗಿ ಮಾಡಿದ್ದಾರೆ. ರಿಯಲ್ ಎಸ್ಟೇಟ್ ಉದ್ದಿಮೆದಾರರು ಶಾಲೆಗಳನ್ನು ಪ್ರಾರಂಭಿಸಿ ವ್ಯಾಪಾರ ಸರಕನ್ನಾಗಿ ಮಾಡಿಕೊಂಡಿದ್ದಾರೆ. ಕೂಡಲೇ ಅಲಿಖಿತ ನಿಯಮ ಜಾರಿ ಮಾಡಿರುವ ಶಾಲೆಗಳನ್ನು ಪರಿಶೀಲಿಸಿ ಕ್ರಮಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ತಾಲ್ಲೂಕು ಘಟಕದ ಅಧ್ಯಕ್ಷ ಶಿವರಾಜ ನಾಯ್ಕ, ಪ್ರಧಾನ ಕಾರ್ಯದರ್ಶಿ ನಿರುಪಾದಿ ಹಿರೇಮಠ, ಬಸವರಾಜ ನಾಯಕ, ಚಂದ್ರಕಾಂತ ಭೋವಿ, ಶಿವರಾಜ ಅಲಬನೂರು, ಕಿರಣ ನಾಯಕ, ರಮೇಶ ಭೋವಿ, ಮಹಾಂತಯ್ಯಸ್ವಾಮಿ, ರಾಜು ನಾಯಕ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.