ADVERTISEMENT

ಲಿಂಗಸುಗೂರು | ಲೋಕ ಅದಾಲತ್: 1,956 ಪ್ರಕರಣ ಇತ್ಯರ್ಥ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2025, 7:13 IST
Last Updated 14 ಸೆಪ್ಟೆಂಬರ್ 2025, 7:13 IST
ಲಿಂಗಸುಗೂರು ನ್ಯಾಯಾಲಯದಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಒಂದಾದ ಜೋಡಿಗಳು
ಲಿಂಗಸುಗೂರು ನ್ಯಾಯಾಲಯದಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಒಂದಾದ ಜೋಡಿಗಳು   

ಲಿಂಗಸುಗೂರು: ಪಟ್ಟಣದ ನ್ಯಾಯಾಲಯದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ರಾಜಿ ಸಂಧಾನದ ಮೂಲಕ 1,956 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಯಿತು.

ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ 59 ಸಿವಿಲ್ ಪ್ರಕರಣ ಹಾಗೂ 1,897 ಕ್ರಿಮಿನಲ್ ಪ್ರಕರಣಗಳು ಸೇರಿ 1,956 ಬಾಕಿ ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದೆ.

ದಾಂಪತ್ಯ ಕಲಹದಿಂದ ಬೇರ್ಪಟ್ಟಿದ್ದ ಎರಡು ಜೋಡಿಗಳಿಗೆ ಹಿರಿಯ ಶ್ರೇಣಿ ನ್ಯಾಯಾಧೀಶೆ ಉಂಡಿ ಮಂಜುಳಾ ಅವರು ಬುದ್ದಿಹೇಳಿ ಒಂದು ಮಾಡಿಸಿದರು. ಪತಿ-ಪತ್ನಿ ಪರಸ್ಪರ ಹೂವಿನ ಹಾರ ಬದಲಾಯಿಸಿ ಸಿಹಿ ತಿನ್ನಿಸುವ ಮೂಲಕ ಕೌಟುಂಬಿಕ ಪ್ರಕರಣಗಳನ್ನು ಇತ್ಯರ್ಥಗೊಳಿಸಿದರು.

ADVERTISEMENT

ಪ್ರಧಾನ ಸಿವಿಲ್ ನ್ಯಾಯಾಧೀಶ ಅಂಬಣ್ಣ.ಕೆ, ಹಿರಿಯ ವಕೀಲರಾದ ನಾಗಪ್ಪ.ಎ., ಮಹಾಲಿಂಗಪ್ಪ, ಸೋಮನಾಳ, ಹಾಜಿಬಾಬಾ, ಉಪೇಂದ್ರ, ಶಿವರಾಜ, ವಕೀಲರು ಹಾಗೂ ಸಿಬ್ಬಂದಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.