ADVERTISEMENT

ಕೋವಿಡ್-19 ಭೀತಿ: ಮಂತ್ರಾಲಯ ಮಠದ ಮಹಾದ್ವಾರ ಬಂದ್‌

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2020, 14:14 IST
Last Updated 20 ಮಾರ್ಚ್ 2020, 14:14 IST

ರಾಯಚೂರು:ಕೊರೊನಾ ವೈರಸ್‌ ಮಹಾಮಾರಿ ವಿಸ್ತರಣೆ ಆಗುತ್ತಿರುವುದರಿಂದ ಮುನ್ನಚ್ಚರಿಕೆ ಕ್ರಮವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವುದಕ್ಕಾಗಿ ಮಂತ್ರಾಲಯದ ರಾಯರ ಮಠದ ಮಹಾದ್ವಾರವನ್ನು ಶುಕ್ರವಾರದಿಂದ ಬಂದ್‌ ಮಾಡಲಾಗಿದೆ ಎಂದು ಮಠದ ಆಡಳಿತ ವ್ಯವಸ್ಥಾಪಕ ಶ್ರೀನಿವಾಸರಾವ್‌ ತಿಳಿಸಿದ್ದಾರೆ.‌

ಯಾವುದೇ ಪ್ರಸಾದ ವಿತರಣಾ ವ್ಯವಸ್ಥೆಯೂ ಇರುವುದಿಲ್ಲ ಎಂದು ತಿಳಿಸಿದ್ದಾರೆ. ಮಂತ್ರಾಲಯದಲ್ಲಿ ರಾಯರ ದರ್ಶನ ಸ್ಥಗಿತ ಮಾಡಲಾಗಿದ್ದು, ಭಕ್ತರು ಬರುವುದನ್ನು ನಿಲ್ಲಿಸಬೇಕು. ತಾವಿರುವ ಸ್ಥಳದಲ್ಲೇ ರಾಯರ ಸ್ಮರಣೆ ಮಾಡುವಂತೆ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಈ ಮೊದಲು ಸೂಚನೆ ನೀಡಿದ್ದರು. ಹಾಗಿದ್ದರೂ ಮಂತ್ರಾಲಯಕ್ಕೆ ಬರುವ ಭಕ್ತರ ಸಂಖ್ಯೆ ಕಡಿಮೆಯಾಗಿರಲಿಲ್ಲ.

ಪಂಚಮುಖಿಯಲ್ಲಿ ದರ್ಶನ ಸ್ಥಗಿತ:ತಾಲ್ಲೂಕಿನ ಗಾಣಧಾಳದಲ್ಲಿರುವ ಪಂಚಮುಖಿ ಆಂಜಿನೇಯಸ್ವಾಮಿ ಮತ್ತು ಎರಕಲಮ್ಮ ದೇವಸ್ಥಾನಗಳಲ್ಲಿ ದರ್ಶನವನ್ನು ಶುಕ್ರವಾರದಿಂದ ಜಿಲ್ಲಾಡಳಿತದ ಸೂಚನೆಯಂತೆ ಸ್ಥಗಿತ ಮಾಡಲಾಗಿದೆ ಎಂದು ಪಂಚಮುಖಿ ಸೇವಾ ಸಮಿತಿ ತಿಳಿಸಿದೆ.

ADVERTISEMENT

ಸೇವೆ, ಉತ್ಸವ ಹಾಗೂ ಯಾವುದೇ ಸಮಾರಂಭಗಳು ಇರುವುದಿಲ್ಲ ಎಂದು ಸಮಿತಿ ಅಧ್ಯಕ್ಷ ಶಾಮಾಚಾರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.