ADVERTISEMENT

ಮಂತ್ರಾಲಯ: ಜುಲೈ 2ರಿಂದ ದರ್ಶನಾವಕಾಶ

​ಪ್ರಜಾವಾಣಿ ವಾರ್ತೆ
Published 28 ಜೂನ್ 2020, 13:36 IST
Last Updated 28 ಜೂನ್ 2020, 13:36 IST
ಮಂತ್ರಾಲಯ ರಾಘವೇಂದ್ರ ಸ್ವಾಮಿಗಳ ಬೃಂದಾವನ
ಮಂತ್ರಾಲಯ ರಾಘವೇಂದ್ರ ಸ್ವಾಮಿಗಳ ಬೃಂದಾವನ   

ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಹಲವು ಸೂಚನೆಗಳೊಂದಿಗೆ ಸಾರ್ವಜನಿಕರಿಗೆ ಜುಲೈ 2 ರಿಂದ ದರ್ಶನಾವಕಾಶ ನೀಡಲಾಗುತ್ತಿದೆ.

ಕೋವಿಡ್‌ ಸೋಂಕು ಹರಡದಂತೆ ಎಲ್ಲರೂ ನಿಯಮಗಳನ್ನು ಪಾಲನೆ ಮಾಡಬೇಕು. 65 ವರ್ಷ ಮೇಲ್ಪಟ್ಟ, 10 ವರ್ಷದೊಳಗಿನ ಮಕ್ಕಳು, ಗರ್ಭಿಣಿಯರಿಗೆ ಹಾಗೂ ವಯೋಸಂಬಂಧಿತ ಕಾಯಿಲೆ ಇದ್ದವರಿಗೆ ಪ್ರವೇಶವಿಲ್ಲ. ಭಕ್ತರು ಮೊಬೈಲ್‌ ಸಂಖ್ಯೆ, ಆಧಾರ ಸಂಖ್ಯೆ ನೀಡುವುದು ಕಡ್ಡಾಯ.

ಮಠದ ವಸತಿ ನಿಲಯದಲ್ಲಿ ಒಂದು ಕೋಣೆಯಲ್ಲಿ ಇಬ್ಬರು ಒಂದು ದಿನ ಮಾತ್ರ ತಂಗಲು ಅವಕಾಶ ನೀಡಲಾಗಿದೆ. ಬೆಳಿಗ್ಗೆ 8 ರಿಂದ ಮಧ್ಯಾಹ್ನ 2, ಸಂಜೆ 4 ರಿಂದ 6ರವರೆಗೂ ದರ್ಶನ ಮಾಡಬಹುದು ಎಂದು ಮಠದ ಆಡಳಿತ ವ್ಯವಸ್ಥಾಪಕ ವೆಂಕಟೇಶ ಜೋಷಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.