ADVERTISEMENT

ಮಂತ್ರಾಲಯ: ಭಕ್ತರಿಗೆ ಬಾಗಿಲು ತೆರೆದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2020, 14:48 IST
Last Updated 2 ಅಕ್ಟೋಬರ್ 2020, 14:48 IST
   

ರಾಯಚೂರು: ಮಂತ್ರಾಲಯದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಮಹಾದ್ವಾರವನ್ನು ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಅಕ್ಟೋಬರ್‌ 2ರಂದು ಮಧ್ಯಾಹ್ನ 1 ಗಂಟೆಗೆ ತೆರೆದರು.

ಭಕ್ತರು ಅಂತರ ಕಾಯ್ದುಕೊಂಡು ದರ್ಶನ ಪಡೆಯುವುದಕ್ಕೆ ಅವಕಾಶ ಮಾಡಲಾಗಿದ್ದು, ಮಠದ ಪ್ರಾಕಾರದಿಂದ ಹೊರಗೆ ಮುಂಭಾಗದಲ್ಲಿ ಸರದಿ ನಿಲ್ಲುವುದಕ್ಕೆ ವ್ಯವಸ್ಥೆ ಇದೆ. ಸದ್ಯ ಸಾಮಾನ್ಯ ದರ್ಶನಕ್ಕೆ ಮಾತ್ರ ಅವಕಾಶ ಮಾಡಲಾಗಿದ್ದು, ವಿಐಪಿ ದರ್ಶನ ಇನ್ನೂ ಆರಂಭಿಸಿಲ್ಲ.

ಮಠದ ಆವರಣವನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ವಾದ್ಯ, ವೇದಘೋಷ ಸಮೇತ ಆಗಮಿಸಿದ ಪೀಠಾಧಿಪತಿಗಳು, ಮಠದ ಬಾಗಿಲು ತೆರೆಯುತ್ತಿದ್ದಂತೆ ಭಕ್ತರು ಪುಳಕಿತರಾದರು. ಸರದಿಯಲ್ಲಿ ಮಠದೊಳಗೆ ಹೋಗಿ ಬೃಂದಾವನ ದರ್ಶನ ಪಡೆದರು.

ADVERTISEMENT

ಕೊರೊನಾ ಮಹಾಮಾರಿ ಸೋಂಕು ತಡೆ ಮುನ್ನಚ್ಚರಿಕೆ ಕ್ರಮವಾಗಿ ಕಳೆದ ಆರು ತಿಂಗಳುಗಳಿಂದ ಮಠದ ಬಾಗಿಲನ್ನು ಬಂದ್‌ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.