
ಬಂಧನ
ಮಾನ್ವಿ: ತಾಲ್ಲೂಕಿನ ನೀರಮಾನ್ವಿ ಗ್ರಾಮದಲ್ಲಿ ಫೆ.6ರಂದು ಕಾರು ಹಾಗೂ ನಗದು ಹಣ ದೋಚಿದ್ದ ಆರೋಪಿಗಳನ್ನು ಮಾನ್ವಿ ಪೊಲೀಸ್ ಠಾಣೆಯ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಅಂದು ಸಂಜೆ ನೀರಮಾನ್ವಿ ಗ್ರಾಮದಲ್ಲಿ ನಡೆದ ರೇಣುಕಾ ಯಲ್ಲಮ್ಮ ದೇವಿ ಜಾತ್ರೆಗೆ ಮಹಾರಾಷ್ಟ್ರದಿಂದ ಆಗಮಿಸಿದ್ದ ಭಕ್ತರೊಬ್ಬರಿಗೆ ಸೇರಿದ ಕಾರನ್ನು 5 ಜನರ ತಂಡ ಬೈಕ್‌ಗಳಿಂದ ಅಡಗಟ್ಟಿ ಕಾರಿನಲ್ಲಿದ್ದ ಚಾಲಕನನ್ನು ತಳಿಸಿದ್ದರು. ನಂತರ ಕಾರು, ನಗದು ಹಣ ಹಾಗೂ ಮೊಬೈಲ್ ಸಮೇತವಾಗಿ ದೋಚಿಕೊಂಡು ಪರಾರಿಯಾಗಿದ್ದರು.
ಕಾರು ಚಾಲಕ ಬಾಲಾಜಿ ಈ ಕುರಿತು ಮಾನ್ವಿ ಪೊಲೀಸ್ ಠಾಣೆಯಲ್ಲಿ ನೀಡಿದ್ದರು. ಪ್ರಕರಣವನ್ನು ದಾಖಲಿಸಿಕೊಂಡಿದ್ದ ಪಿ.ಐ ಸೋಮಶೇಖರ ಎಸ್. ಕೆಂಚರೆಡ್ಡಿ ಕಾರು ಚಾಲಕನ ಮೊಬೈಲ್ ಲೊಕೇಶನ್ ಅಧಾರದಲ್ಲಿ ತಾಲ್ಲೂಕಿನ ಹಿರೇಕೊಟ್ನೆಕಲ್ ಗ್ರಾಮದ ಹೊರವಲಯದ ಜಮೀನೊಂದರಲ್ಲಿ ಶನಿವಾರ ಬೆಳಿಗ್ಗೆ ಪತ್ತೆ ಹಚ್ಚಿ 5 ಜನ ಆರೋಪಿತರಲ್ಲಿ 3 ಜನ ಆರೋಪಿತರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳಿಂದ ಕಾರು ಹಾಗೂ ಬೈಕ್ ವಶಕ್ಕೆ ಪಡೆದಿದ್ದು, ಇನ್ನಿಬ್ಬರು ಆರೋಪಿತರಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ. ಆರೋಪಿಗಳು ಮಾನ್ವಿ ಪಟ್ಟಣ ಹಾಗೂ ಹಿರೇಕೊಟ್ನೆಕಲ್ ಗ್ರಾಮಕ್ಕೆ ಸೇರಿದವರು ಎಂದು ತಿಳಿದುಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.