ಮಸ್ಕಿ (ರಾಯಚೂರು): ಕೋವಿಡ್ ಪಾಸಿಟಿವ್ ಕಾರಣ 'ಹೋಮ್ ಐಸೋಲೇಷನ್‘ ನಲ್ಲಿರುವ ಮಸ್ಕಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ ಅವರು ಕೋವಿಡ್ ಮಾರ್ಗಸೂಚಿ ಅನ್ವಯ ಪಿಪಿಇ ಕಿಟ್ ಧರಿಸಿ ಶನಿವಾರ ಸಂಜೆ 6.30ಕ್ಕೆ ಅವರ ಮನೆ ಹತ್ತಿರದ ಕಿಲ್ಲಾ ಮತಗಟ್ಟೆಗೆ ಬಂದು ತಮ್ಮ ಮತ ಚಲಾಯಿಸಿದರು.
ಸಂಜೆ 6 ರಿಂದ 7 ಗಂಟೆ ವರೆಗೆ ಕೋವಿಡ್ ಪಾಸಿಟಿವ್ ಇದ್ದವರಿಗೆ ಮತ ಚಲಾಯಿಸಲು ಪ್ರತ್ಯೇಕ ಸಮಯ ಗೊತ್ತು ಮಾಡಲಾಗಿತ್ತು. ಈ ಸಮಯದಲ್ಲಿಯೇ ಅವರು ಬಂದು ಮತ ಚಲಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.