ADVERTISEMENT

ಮತಕ್ಕಾಗಿ ಬಿಜೆಪಿ ನಾಯಕರ ನಾಟಕ: ಟೀಕೆ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2021, 11:44 IST
Last Updated 7 ಏಪ್ರಿಲ್ 2021, 11:44 IST

ಮಸ್ಕಿ: ‘ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ನಾರಾಯಣಪುರ ಬಲದಂಡೆಯ 5 (ಎ) ಕಾಲುವೆ ಯೋಜನೆಗಾಗಿ ಅನುದಾನ ಮೀಸಲಿಡದ ಬಿಜೆಪಿ ಸರ್ಕಾರದ ಸಚಿವರು ಹಾಗೂ ನಾಯಕರು ಈಗ ಉಪ ಚುನಾವಣೆಯಲ್ಲಿ ಮತಕ್ಕಾಗಿ ನಾಟಕವಾಡುತ್ತಿದ್ದಾರೆ‘ ಎಂದು 5 (ಎ) ಕಾಲುವೆ ಹೋರಾಟ ಸಂಯುಕ್ತ ವೇದಿಕೆಯ ಸಂಚಾಲಕ ಆರ್.ಮಾನ್ಸಯ್ಯ ಆರೋಪಿಸಿದರು.

ಪಟ್ಟಣದಲ್ಲಿ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಭಾಗದ ರೈತರು ಹಲವು ವರ್ಷಗಳಿಂದ ಯೋಜನೆ ಜಾರಿಗಾಗಿ ಹೋರಾಟ ಮಾಡಿಕೊಂಡು ಬರುತ್ತಿದ್ದಾರೆ. ಆದರೆ, ಮೂರು ಬಾರಿ ಶಾಸಕರಾಗಿ ಕೆಲಸ ಮಾಡಿದ ಪ್ರತಾಪಗೌಡ ಪಾಟೀಲ ಯೋಜನೆ ಜಾರಿ ಅಸಾದ್ಯ ಎಂದು ಹೇಳಿ ಈಗ ಮತ ಪಡೆಯಲು ಹೊಸ ನಾಟಕವಾಡುತ್ತಿದ್ದಾರೆ‘ ಎಂದು ದೂರಿದರು.

‘ಬಿಜೆಪಿಯು ವಿಜಯೇಂದ್ರ ಅವರನ್ನು ಮುಂದೆಬಿಡುವ ಮೂಲಕ ಮತಗಳನ್ನು ಖರೀದಿ ಮಾಡಲು ಮುಂದಾಗಿದೆ. ಆದರೆ, ಅವರ ಪ್ರಯತ್ನ ಈ ಚುನಾವಣೆಯಲ್ಲಿ ನಡೆಯುವುದಿಲ್ಲ. ಮಸ್ಕಿಯಲ್ಲಿ ನ್ಯಾಯಸಮ್ಮತ ಚುನಾವಣೆ ನಡೆಸಲು ಚುನಾವಣೆ ಆಯೋಗ ಬಿಗಿ ಕ್ರಮ ಕೈಗೊಳ್ಳಬೇಕು. ವಿಜಯೇಂದ್ರ ಮತ್ತು ಅವರ ತಂಡವನ್ನು ಕ್ಷೇತ್ರದಿಂದ ಹೊರ ಹಾಕಬೇಕು‘ ಎಂದು ಒತ್ತಾಯಿಸಿದರು.

ADVERTISEMENT

ಮುಖಂಡ ನಾಗಪ್ಪ ತಳವಾರ, ಸಂತೋಷ ದಿನ್ನಿ, ಮೌನೇಶ ದೊಡ್ಡಮನಿ, ಮಾರುತಿ ಜಿನ್ನಾಪೂರ, ಇತರರು ಇದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.