ADVERTISEMENT

ಕವಿತಾಳ | ಸಾಮೂಹಿಕ ವಿವಾಹ: ವಧು–ವರರ ವಸ್ತ್ರ ವಿತರಣೆ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2025, 13:33 IST
Last Updated 26 ಏಪ್ರಿಲ್ 2025, 13:33 IST
ಕವಿತಾಳ ಸಮೀಪದ ಉಟಕನೂರಿನ ಅಡವಿ ಸಿದ್ದೇಶ್ವರ ಮಠದಲ್ಲಿ ವಧು–ವರರ ಕುಟುಂಬಸ್ಥರಿಗೆ ಸ್ವಾಮೀಜಿ ಶನಿವಾರ ವಸ್ತ್ರಗಳನ್ನು ವಿತರಿಸಿದರು
ಕವಿತಾಳ ಸಮೀಪದ ಉಟಕನೂರಿನ ಅಡವಿ ಸಿದ್ದೇಶ್ವರ ಮಠದಲ್ಲಿ ವಧು–ವರರ ಕುಟುಂಬಸ್ಥರಿಗೆ ಸ್ವಾಮೀಜಿ ಶನಿವಾರ ವಸ್ತ್ರಗಳನ್ನು ವಿತರಿಸಿದರು   

ಕವಿತಾಳ: ‘ದೂರದ ಊರುಗಳಿಂದ ಬರುವವರು ಒಂದು ದಿನ ಮುಂಚಿತವಾಗಿ ಬಂದು ಮಠದಲ್ಲಿ ಉಳಿದುಕೊಂಡರೆ ಮುಹೂರ್ತದ ಸಮಯಕ್ಕೆ ಸರಿಯಾಗಿ ಮಾಂಗಲ್ಯ ಧಾರಣೆಗೆ ಅನುಕೂಲವಾಗಲಿದೆ’ ಎಂದು ಉಟಕನೂರು ಅಡವಿ ಸಿದ್ದೇಶ್ವರ ಮಠದ ಮರಿಬಸವರಾಜ ದೇಶೀಕೇಂದ್ರ ಸ್ವಾಮೀಜಿ ಹೇಳಿದರು.

ಮೇ 1ರಂದು ನಡೆಯುವ ಸಾಮೂಹಿಕ ವಿವಾಹಕ್ಕೆ ನೋಂದಾಯಿಸಿಕೊಂಡ 71 ಜೋಡಿ ವಧು–ವರರ ಪಾಲಕರಿಗೆ ವಸ್ತ್ರಗಳನ್ನು ಶನಿವಾರ ವಿತರಿಸಿ ಮಾತನಾಡಿದರು.

‘ಮಾಂಗಲ್ಯ, ಬಾಸಿಂಗ, ದಂಡೆ, ಕಾಲುಂಗುರ ಮತ್ತಿತರ ವಸ್ತುಗಳನ್ನು ಮಾಂಗಲ್ಯದ ಸಮಯದಲ್ಲಿ ವಿತರಿಸಲಾಗುವುದು. ವಧು–ವರರ ವಸ್ತ್ರ ಸ್ವೀಕರಿಸಿದ ಕುಟುಂಬದ ಸದಸ್ಯರು ಸಂಬಂಧಿಸಿದ ವಧು ವರರಿಗೆ ಶೀಘ್ರ ತಲುಪಿಸಬೇಕು’ ಎಂದು ತಿಳಿಸಿದರು.

ADVERTISEMENT

ಡಿಸಿಸಿ ಬ್ಯಾಂಕ್‌ ನಿರ್ದೇಶಕ ಸೋಮನಗೌಡ ಬಾದರ್ಲಿ, ಮುಖಂಡರಾದ ಫಕೀರಪ್ಪ ರಾಮತ್ನಾಳ, ಚಂದ್ರಶೇಖರ ಬಾದರ್ಲಿ, ಆದನಗೌಡ, ಯಂಕನಗೌಡ, ವೆಂಕಟೇಶ ರಾಗಲಪರ್ವಿ, ಈರಣ್ಣ, ಶೇಖರಪ್ಪ ಹುಲ್ಲೂರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.