ADVERTISEMENT

ಎಂಬಿಬಿಎಸ್‌ ಪರೀಕ್ಷೆ: ರಿಮ್ಸ್‌ಗೆ 8 ರ್‍ಯಾಂಕ್

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2025, 14:40 IST
Last Updated 2 ಮಾರ್ಚ್ 2025, 14:40 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ರಾಯಚೂರು: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ನಡೆಸಿದ ಎಂ.ಬಿ.ಬಿ.ಎಸ್ ಪರೀಕ್ಷೆಯಲ್ಲಿ ರಾಯಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ರಿಮ್ಸ್‌)ಯ 8 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

ಸ್ನಾತಕೋತ್ತರ ವಿಭಾಗ: ಡಾ.ಮೆರಿಪ್ರಿಯಾ ವರ್ಗೀಸ್ ಜನರಲ್ ಮೆಡಿಸಿನ್ ವಿಭಾಗದಲ್ಲಿ ರಾಜ್ಯಕ್ಕೆ 3ನೇ ರ್‍ಯಾಂಕ್, ಡಾ. ಜಿ.ಎಸ್. ರಮ್ಯಾ 9ನೇ ರ್‍ಯಾಂಕ್, ಶಿಶು ವೈದ್ಯಕೀಯ ವಿಭಾಗದ ಡಾ. ಸುಷ್ಮಾ ವಿ 8ನೇ ರ್‍ಯಾಂಕ್ ಹಾಗೂ ಡಾ.ಟಿ.ಶ್ವೇತಾ 10ನೇ ರ್‍ಯಾಂಕ್ ಪಡೆದಿದ್ದಾರೆ.

ADVERTISEMENT

ಪದವಿ ವಿಭಾಗ: ರಾಹುಲ್ ರಾಜ್ ಎಸ್.ನಾಯ್ಕ್ ಜನರಲ್ ಮೆಡಿಸಿನ್ ವಿಷಯದಲ್ಲಿ 6ನೇ ರ್‍ಯಾಂಕ್, ಸಂತೋಷ ಹೊಟ್ಟಿ ಫಿಸಿಯೋಲಾಜಿ ವಿಷಯದಲ್ಲಿ 4ನೇ ರ್‍ಯಾಂಕ್ ಹಾಗೂ ವಿದ್ಯಾಸಾಗರ 8ನೇ ರ್‍ಯಾಂಕ್ ಮತ್ತು ಯಶವಂತ ಮುದಗಲ್‌ ಅವರು ನೇತ್ರ ಶಸ್ತ್ರಚಿಕಿತ್ಸಾ ವಿಷಯದಲ್ಲಿ 8ನೇ ರ್‍ಯಾಂಕ್ ಪಡೆದುಕೊಂಡಿದ್ದಾರೆ ಎಂದು ಸಂಸ್ಥೆಯ ಡೀನ್ ಡಾ.ಬಸವರಾಜ್ ಪಾಟೀಲ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.