ADVERTISEMENT

16 ಎಕರೆ ಕುಂಟೆ ಹೊಡೆದ ಎತ್ತುಗಳು

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2021, 16:38 IST
Last Updated 14 ಆಗಸ್ಟ್ 2021, 16:38 IST
ರಾಯಚೂರು ತಾಲ್ಲೂಕಿನ ಮಿಡಗಲದಿನ್ನಿ ಸೀಮಾಂತರದಲ್ಲಿ ಶರಣಗೌಡ ವೀರನಗೌಡ ಅವರ 16 ಎಕರೆ ಹತ್ತಿ ಹೊಲದಲ್ಲಿ ಒಂದೇ ಜೋಡಿ ಎತ್ತುಗಳು ಶನಿವಾರ ಕುಂಟೆ ಹೊಡೆಯುವ ಮೂಲಕ ಗಮನ ಸೆಳೆದಿವೆ
ರಾಯಚೂರು ತಾಲ್ಲೂಕಿನ ಮಿಡಗಲದಿನ್ನಿ ಸೀಮಾಂತರದಲ್ಲಿ ಶರಣಗೌಡ ವೀರನಗೌಡ ಅವರ 16 ಎಕರೆ ಹತ್ತಿ ಹೊಲದಲ್ಲಿ ಒಂದೇ ಜೋಡಿ ಎತ್ತುಗಳು ಶನಿವಾರ ಕುಂಟೆ ಹೊಡೆಯುವ ಮೂಲಕ ಗಮನ ಸೆಳೆದಿವೆ   

ರಾಯಚೂರು: ತಾಲ್ಲೂಕಿನ ಮಿಡಗಲದಿನ್ನಿ ಗ್ರಾಮದ ಶರಣಗೌಡ ವೀರನಗೌಡ ಅವರ 16 ಎಕರೆ ಹತ್ತಿ ಹೊಲದಲ್ಲಿ ಒಂದೇ ಜೋಡಿ ಎತ್ತುಗಳು ಒಂದೇ ದಿನದಲ್ಲಿ ಕುಂಟೆ ಹೊಡೆಯುವ ಮೂಲಕ ಶನಿವಾರ ಗಮನ ಸೆಳೆದಿವೆ.

ಬೆಳಿಗ್ಗೆ 6 ಗಂಟೆಯಿಂದ ಆರಂಭವಾದ ಕುಂಟೆ ಎಡೆ ಹೊಡೆಯುವ ಕೆಲಸ ಸಂಜೆ 4.30 ರವರೆಗೆ ನಡೆಯಿತು. ಗ್ರಾಮಸ್ಥರು ಎತ್ತುಗಳ ಸಾಹಸವನ್ನು ಮೆಚ್ಚಿಕೊಂಡು ಮುಗಿಬಿದ್ದಿದ್ದರು. ಜಮೀನು ಕುಂಟೆ ಹೊಡೆಯುತ್ತಿರುವ ವಿಷಯ ಕೇಳಿದ ಮಿಡಲಗದಿನ್ನಿ ಅಕ್ಕಪಕ್ಕ ಗ್ರಾಮಗಳಾದ ಗುಂಜಹಳ್ಳಿ, ಯರಗೇರಾ, ಪುಚ್ಚಲದಿನ್ನಿ, ಇಡನೂರ ಸೇರಿದಂತೆ ವಿವಿಧ ಗ್ರಾಮಗಳಿಂದ ಜನರು ತಂಡೋಪ ತಂಡವಾಗಿ ಬಂದಿದ್ದರು.

ಗ್ರಾಮಸ್ಥರು ಜಮೀನಿನಿಂದ ಗ್ರಾಮದವರೆಗೆ ಮೆರವಣಿಗೆ ಮೂಲಕ ಎತ್ತುಗಳನ್ನು ಕರೆತಂದರು. ತಮಟೆ ಬಾರಿಸಿ ಎತ್ತುಗಳ ಮಾಲೀಕರನ್ನು ಅಭಿನಂದಿಸಿದರು. ಒಂದೇ ದಿನದಲ್ಲಿ ಜಮೀನಿನ ಕೆಲಸ ಮುಗಿದ ಎತ್ತುಗಳ ಮಾಲೀಕ ಮಹೇಶಗೌಡ ಪಾಗುಂಟಪ್ಪ ಅವರಿಗೆ ಜಮೀನು ಮಾಲೀಕ ಶರಣಗೌಡ ವೀರನಗೌಡ ಅವರು ಸನ್ಮಾನಿಸಿ ಐದು ತೊಲೆ ಬೆಳ್ಳಿ ಖಡಗವನ್ನು ಬಹುಮಾನವಾಗಿ ನೀಡಿದರು.

ADVERTISEMENT

ಗ್ರಾಮಸ್ಥರಾದ ಬಸನಗೌಡ, ಪಿ.ಬಸವರಾಜ ಸೇರಿದಂತೆ ಮಿಡಲಗಲದಿನ್ನಿ ಗ್ರಾಮಸ್ಥರು, ಸುತ್ತಮುತ್ತಲಿನ ಗ್ರಾಮದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.