ಹಟ್ಟಿ ಚಿನ್ನದ ಗಣಿ: ಗೌಡೂರು ಗ್ರಾಮದ ಚಿಕ್ಕ ಮಕ್ಕಳ ಹೊಟ್ಟೆ ಸೇರಬೇಕಾದ ಮಿಲೆಟ್ ಲಡ್ಡು ಆಹಾರ ಪದಾರ್ಥದಲ್ಲಿ ಹುಳುಗಳು ಕಂಡು ಬಂದಿದ್ದು, ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಗೌಡೂರು ಗ್ರಾಮದ ವೀರಭದ್ರೇಶ್ವರ ದೇವಸ್ಧಾನದ ಹತ್ತಿರದ 3ನೇ ಅಂಗನವಾಡಿ ಕೇಂದ್ರದಲ್ಲಿ ಅವಧಿ ಮುಗಿದ ಮಿಲೆಟ್ ಲಡ್ಡು ಮಿಶ್ರಣ ಪ್ಯಾಕೆಟ್ ವಿತರಣೆ ಮಾಡಲಾಗಿದೆ. ಇಂಥ ಆಹಾರ ಪದಾರ್ಥ ತಿಂದು ಚಿಕ್ಕ ಮಕ್ಕಳ ಜೀವಕ್ಕೆ ಹಾನಿಯಾದರೆ ಹೊಣೆಯಾರು ಎಂದು ಗ್ರಾಮಸ್ಧರು ದೂರಿದ್ದಾರೆ.
‘ಅಂಗನವಾಡಿ ಶಿಕ್ಷಕಿಗೆ ಸಮಸ್ಯೆ ಬಗ್ಗೆ ಹಲವು ಬಾರಿ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಳ್ಳದೇ ಅವಧಿ ಮುಗಿದ ಪ್ಯಾಕೆಟ್ ನೀಡುತ್ತಿದ್ದಾರೆ. ವಿಚಾರಿಸಿದರೆ ನೀವು ಯಾರಿಗೂ ಬೇಕಾದರೂ ಹೇಳಿಕೊಳ್ಳಿ ಎಂದು ನಮ್ಮನ್ನೆ ಗದರಿಸುತ್ತಾರೆ ಎನ್ನುತ್ತಾರೆ ನೊಂದ ಮಕ್ಕಳ ಪಾಲಕರು.
‘ಅಂಗನವಾಡಿ ಕೇಂದ್ರದಲ್ಲಿ ಸಮಸ್ಯೆ ಇದೆ ಸಂಬಂಧಪಟ್ಟ ಮೇಲಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ನಮ್ಮ ಸಮಸ್ಯೆಯನ್ನು ಕೇಳುವವರೆ ಇಲ್ಲದಂತಾಗಿದೆ’ ಎಂದು ಗರ್ಭಿಣಿ ಮಹಿಳೆಯರು ನೋವನ್ನು ತೊಡಿಕೊಂಡರು.
ಸಂಬಂದಪಟ್ಟ ಮೇಲಾಧಿಕಾರಿಗಳು ಇತ್ತ ಕಡೆ ಗಮನಹರಿಸಿ ಅಂಗನವಾಡಿ ಕೇಂದ್ರಗಳಿಗೆ ಗುಣ ಮಟ್ಟದ ಆಹಾರ ವಿತರಣೆ ಮಾಡಬೇಕು ಎಂದು ಗ್ರಾಮಸ್ಧರು ಒತ್ತಾಯಿಸಿದ್ದಾರೆ.
‘ಗೌಡೂರು ಗ್ರಾಮದಲ್ಲಿ ಅವಧಿ ಮುಗಿದ ಮಿಲೆಟ್ ಪ್ಯಾಕೆಟ್ ವಿತರಣೆ ಮಾಡಿದರ ಬಗ್ಗೆ ಜನರಿಂದ ದೂರುಗಳು ಬಂದಿವೆ. ಅಂಗನವಾಡಿ ಕೇಂದ್ರದ ಸಿಬ್ಬಂದಿಗೆ ಅವಧಿ ಮುಗಿದ ಪ್ಯಾಕೆಟ್ ವಿತರಣೆ ಮಾಡದಂತೆ ಖಡಕ್ ಎಚ್ಚರಿಕೆ ನೀಡಲಾಗಿದೆ. ಮುಂದೆ ಈ ತರಹದ ಘಟನೆಗಳು ಮರು ಕಳುಹಿಸದಂತೆ ಕ್ರಮ ಕೈಗೊಳ್ಳಲಾಗುವುದು’ ಎಂದು ಸಿಡಿಪಿಒ ನಾಗರತ್ನ ಭರವಸೆ ನೀಡಿದರು.
ಗೌಡೂರು ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಅವಧಿ ಮುಗಿದ ಆಹಾರ ಪ್ಯಾಕೆಟ್ ವಿತರಣೆ ಮಾಡಲಾಗಿದ್ದು ಸಂಬಂಧಪಟ್ಟ ಅಧಿಕಾರಿಗಳು ಕ್ರಮಕ್ಕೆ ಮುಂದಾಗಲಿದುರುಗಪ್ಪ ಗ್ರಾಮಸ್ಧ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.