ADVERTISEMENT

ರಾಯಚೂರು ಜಿಲ್ಲೆಯಲ್ಲಿ ಸಾಧಾರಣ ಮಳೆ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2023, 13:59 IST
Last Updated 4 ಸೆಪ್ಟೆಂಬರ್ 2023, 13:59 IST
ರಾಯಚೂರಿನಲ್ಲಿ ಜಿಟಿ ಜಿಟಿ ಮಳೆಯಲ್ಲಿ ಬೈಕ್‌ ಮೇಲೆ ಸಾಗಿದ ಸವಾರರು
ರಾಯಚೂರಿನಲ್ಲಿ ಜಿಟಿ ಜಿಟಿ ಮಳೆಯಲ್ಲಿ ಬೈಕ್‌ ಮೇಲೆ ಸಾಗಿದ ಸವಾರರು   

ರಾಯಚೂರು: ಜಿಲ್ಲೆಯಾದ್ಯಂತ ಸೋಮವಾರ ಸಾಧಾರಣ ಮಳೆಯಾಗಿದೆ. ರಾಯಚೂರು ನಗರ, ಮಸ್ಕಿ, ಮಾನ್ವಿ, ಲಿಂಗಸುಗೂರ, ಸಿಂಧನೂರು, ದೇವದುರ್ಗ, ಹಟ್ಟಿ ಚಿನ್ನದಗಣಿ ಹಾಗೂ ಜಾಲಹಳ್ಳಿಯಲ್ಲಿ ಸಾಧಾರಣ ಮಳೆ ಸುರಿದಿದೆ.

ಮಸ್ಕಿ ತಾಲ್ಲೂಕಿನ ಗುಡದೂರಿನಲ್ಲಿ 49 ಮಿ.ಮೀ, ಹಾಲಾಪುರ 45 ಮಿ.ಮೀ, ಬಳಗಾನೂರು 38 ಮಿ.ಮೀ, ಮಸ್ಕಿ 32.6 ಹಾಗೂ ಪಾಮನಕೆಲ್ಲೂರಿನಲ್ಲಿ 24.4 ಮಿ.ಮೀ ಮಳೆ ದಾಖಲಾಗಿದೆ.

ಭಾನುವಾರ ವಿಪರೀತ ಸೆಕೆ ಇತ್ತು. ಸೋಮವಾರ ಬೆಳಗಿನ ಜಾವದಿಂದ ಮೋಡಕವಿದ ವಾತಾವರಣ ಇತ್ತು. ಮಸ್ಕಿಯಲ್ಲಿ ಬೆಳಗಿನ ಜಾವ ಮಳೆ ಅಬ್ಬರಿಸಿದರೆ, ಉಳಿದ ಕಡೆ ಮಧ್ಯಾಹ್ನ ಮಳೆ ಬಿದ್ದಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.