ಮುದಗಲ್: ಜಿಲ್ಲಾ ನಿರಾಶ್ರಿತರ ಪರಿಹಾರ ಕೇಂದ್ರದ ಅಧಿಕಾರಿಗಳು ಸಾರ್ವಜನಿಕರಿಗೆ ಕಿರಿಕಿರಿ ನೀಡುವ ಭಿಕ್ಷಾಟನೆ ದಂಧೆ ಕಡಿವಾಣಕ್ಕೆ ಮುಂದಾಗಿದ್ದಾರೆ. ಪಟ್ಟಣದಲ್ಲಿ ಸಂಚರಿಸಿ 8 ಜನ ಭಿಕ್ಷುಕರು, ಇಬ್ಬರು ಮಂಗಳಮುಖಿಯರನ್ನು ನಿರಾಶ್ರಿತರ ಕೇಂದ್ರಕ್ಕೆ ಕರೆದುಕೊಂಡು ಹೋದರು.
ಪಟ್ಟಣದ ಬಸ್ ನಿಲ್ದಾಣ, ಮುಖ್ಯ ರಸ್ತೆ ಬದಿಯಲ್ಲಿರುವ ಅಂಗಡಿಗಳ ಮುಂದೆ ಭಿಕ್ಷೆ ಬೇಡುವ ಭಿಕ್ಷುಕರನ್ನು ಗುರುತಿಸಿ, ವಶಕ್ಕೆ ಪಡೆದುಕೊಂಡರು. ವಿಷಯ ತಿಳಿದ ಕೆಲ ಭಿಕ್ಷುಕರು ತಪ್ಪಿಸಿಕೊಂಡರು.
ಭಿಕ್ಷುಕರನ್ನು ಕಂಡ ಕೂಡಲೇ ಸಾರ್ವಜನಿಕರು ಟೋಲ್ ಫ್ರೀ ಸಂಖ್ಯೆ 10581, ಸಹಾಯವಾಣಿ 9482300400 ಸಂಖ್ಯೆಗೆ ಕರೆ ಮಾಡಿ ಸಹಕರಿಸಿ ಎಂದು ರಾಯಚೂರು ನಿರಾಶ್ರಿತರ ಪರಿಹಾರ ಕೇಂದ್ರದ ಅಧಿಕ್ಷಕ ತಾಯಪ್ಪ ಶಿವಾಂಗಿ ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.