
ಮುದಗಲ್: ಕಿಲ್ಲಾ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ವಿಶ್ವ ಪರಂಪರೆ ಸಪ್ತಾಹ ದಿನಾಚರಣೆ ಪುರಸಭೆ ಮಾಜಿ ಅಧ್ಯಕ್ಷ ಅಶೋಕಗೌಡ ಸೋಮವಾರ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕ ಚನ್ನಾರಡ್ಡಿ ಮಾತನಾಡುತ್ತ ಪಟ್ಟದಲ್ಲಿರುವ ಐತಿಹಾಸಿಕ ಸ್ಮಾರಕಗಳನ್ನು ರಕ್ಷಣೆ ಮಾಡಬೇಕು. ಪ್ರಾಚೀನವಾದ ಮುದಗಲ್ ವಿಶಿಷ್ಟ ಸಂಸ್ಕೃತಿ ಹೊಂದಿದೆ. ಸ್ಮಾರಕಗಳ ರಕ್ಷಣೆ ನಮ್ಮಲ್ಲೆರ ಹೊಣೆಯಾಗಿದೆ ಎಂದರು.
ನಂತರ ಶರಣಪ್ಪ ಮಾತನಾಡಿ,‘ಮುದಗಲ್ ಪ್ರಾಚೀನ ದೊಡ್ಡ ವ್ಯಾಪರ ಕೇಂದ್ರವಾಗಿದ್ದರಿಂದ ಕ್ರೈಸ್ತರು ಮುದಗಲ್‌ಗೆ ಬಂದರು. ಮುದಗಲ್ ಕೋಟೆಗಾಗಿ ಬಹುಮನಿ ಷಾ, ವಿಜಯಪುರ ಆದಿಲ್ ಶಾಹಿ, ವಿಜಯ ನಗರ ಅರಸರ ನಡುವೆ ಅನೇಕ ಯುದ್ಧಗಳು ನಡೆದಿವೆ. ಈ ಅರಸು ಮನೆತನಗಳಿಗೆ ಮುದಗಲ್ ಪ್ರತಿಷ್ಠ ಕಣವಾಗಿ ಮಾರ್ಪಟ್ಟಿದೆ. ಮುದಗಲ್ ಕೋಟೆಗಾಗಿಯೇ ತಾಳಿಕೋಟೆ ಯುದ್ಧ ನಡೆದಿದೆ ಎಂದರು.
ಪ್ರಾಚ್ಯವಸ್ತು ಅಧಿಕಾರಿ ಶಿವಪ್ರಕಾಶ, ಗೃಹ ರಕ್ಷದಳ ತಾಲ್ಲೂಕು ಅಧಿಕಾರಿ ತಿಮ್ಮನಗೌಡ ಆನೆಹೊಸೂರು, ಎಂ.ಡಿ. ಚಿತ್ತರಿಗಿ ಮಾತನಾಡಿದರು.
ಕಾರ್ಯಕ್ರಮವನ್ನು ಪುರಸಭೆ ಮಾಜಿ ಅಧ್ಯಕ್ಷ ಅಶೋಕಗೌಡ ಆದಾಪುರ ಉದ್ಘಾಟಿಸಿದರು. ಪುರಸಭೆ ಮುಖ್ಯಾಧಿಕಾರಿ ಪ್ರವೀಣ ಬೋಗಾದಿ, ಪ್ರಾಂಶುಪಾಲ ಸಿದ್ರಾಮ ಪಾಟೀಲ, ದೇವಣ್ಣ ಕೋಡಿಹಾಳ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು, ಆರೋಮ ಪಿಯು ಕಾಲೇಜು ವಿದ್ಯಾರ್ಥಿಗಳು, ಅನ್ನದಾನಗೌಡ ಸ್ಮಾರಕ ಪಿಯು ಕಾಲೇಜು ವಿದ್ಯಾರ್ಥಿಗಳು, ಸರ್ಕಾರಿ ಪಿಯು ಕಾಲೇಜು ವಿದ್ಯಾರ್ಥಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.