ADVERTISEMENT

ಮುದಗಲ್: 850 ಅಡಿ ಉದ್ದದ ಕನ್ನಡ ಬಾವುಟ ಮೆರವಣಿಗೆ

ಕರ್ನಾಟಕ ರಕ್ಷಣಾ ವೇದಿಕೆಯಿಂದ ಕರ್ನಾಟಕ ರಾಜ್ಯೋತ್ಸವ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2024, 13:17 IST
Last Updated 28 ನವೆಂಬರ್ 2024, 13:17 IST
ಮುದಗಲ್ ಪಟ್ಟಣದಲ್ಲಿ ಕರವೇಯಿಂದ ಗುರುವಾರ ಭುವನೇಶ್ವರಿ ದೇವಿ ಚಿತ್ರದ ಮೆರವಣಿಗೆ ನಡೆಸಲಾಯಿತು
ಮುದಗಲ್ ಪಟ್ಟಣದಲ್ಲಿ ಕರವೇಯಿಂದ ಗುರುವಾರ ಭುವನೇಶ್ವರಿ ದೇವಿ ಚಿತ್ರದ ಮೆರವಣಿಗೆ ನಡೆಸಲಾಯಿತು   

ಮುದಗಲ್: ಪಟ್ಟಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಮುದಗಲ್ ಹೋಬಳಿ ಘಟಕದಿಂದ ಆಶ್ರಯದಲ್ಲಿ ಗುರುವಾರ ಕರ್ನಾಟಕ ರಾಜ್ಯೋತ್ಸವ ಆಚರಿಸಲಾಯಿತು. ಈ ಅಂಗವಾಗಿ 850 ಅಡಿ ಉದ್ದದ ಕನ್ನಡ ಬಾವುಟವನ್ನು ಮೆರವಣಿಗೆ ಮಾಡಲಾಯಿತು.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪಟ್ಟಣದಲ್ಲಿ ನ.28ರಂದು ಬೆಳಿಗ್ಗೆ 10 ಗಂಟೆಗೆ

ಪಟ್ಟಣದ ಸೆಕ್ರೆಡ್‌ ಹಾರ್ಟ್ಸ್ ಇಂಗ್ಲಿಷ್‌ ಮಾಧ್ಯಮ ಶಾಲೆಯ ಮೈದಾನದಿಂದ ಶುರುವಾರ ಭುವನೇಶ್ವರಿ ದೇವಿ ಚಿತ್ರ ಹಾಗೂ ಕನ್ನಡ ಬಾವುಟದ ಮೆರವಣಿಗೆಗೆ ಪುರಸಭೆ ಅಧ್ಯಕ್ಷೆ ಮಹಾದೇವಮ್ಮ ನರಸಯ್ಯ ಗುತ್ತೇದಾರ ಚಾಲನೆ ನೀಡಿದರು. ಬಳಿಕ ಪಟ್ಟಣದ ಸಾರ್ವಜನಿಕರು, ವಿವಿಧ ಶಾಲಾ–ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪ್ರಮುಖ ರಸ್ತೆಗಳ ಮೂಲಕ ಪುರಸಭೆಯ ರಂಗ ಮಂದಿರದ ತನಕ ಕನ್ನಡ ಬಾವುಟ ಹಿಡಿದು ಮೆರವಣಿಗೆಯಲ್ಲಿ ಹೆಜ್ಜೆಹಾಕಿದರು.

ADVERTISEMENT

ಬಳಿಕ ರಂಗ ಮಂದಿರದ ಹತ್ತಿರದ ಧ್ವಜಸ್ತಂಭದಲ್ಲಿ ಕರವೇ ಲಿಂಗಸುಗೂರು ತಾಲ್ಲೂಕು ಘಟಕದ ಅಧ್ಯಕ್ಷ ಜಿಲಾನಿ ಪಾಷಾ ಕನ್ನಡ ಧ್ವಜಾರೋಹಣ ನೆರವೇರಿಸಿದರು. ಬಳಿಕ ಅವರು ಕನ್ನಡ ಭಾಷಾಭಿಮಾನದ ಕುರಿತು ಮಾತನಾಡಿದರು.

ಅಪ್ಪು ಧಾಮದ ಮಕ್ಕಳು ವೇಷಭೂಷಣ ತೊಟ್ಟು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಪಿಎಸ್‌ಐ ವೆಂಕಟೇಶ, ಕರವೇ ಪದಾಧಿಕಾರಿಗಳಾದ ಸಂತೋಷ, ಎಸ್.ಎನ್.ಖಾದ್ರಿ, ಸಾಬು ಹುಸೇನ್, ಇಸ್ಮಾಯಿಲ್ ಬಳಿಗಾರ, ಮಹಾಂತೇಶ ಚಟ್ಟರ್, ಇಮಾಮ್‌ಹುಸೇನ್ ತಮಾಟಾ, ಶಶಿಧರ ಸ್ವಾಮಿ, ಬಾಲಪ್ಪ, ಜಮಾಲಿಸಾಬ್‌, ರಾಯಪ್ಪ, ಹನೀಫ್‌ ಖಾನ್, ಭೀಮಣ್ಣ, ಅಬ್ದುಲ್ ಮಜೀದ್, ಇಸ್ಮಾಯಿಲ್ ಕೊಳ್ಳಿ, ಜಮೀರ್ ಮೇಸ್ತ್ರಿ, ಅವೇಜ್ ಮುನ್ನಾ, ಮಸ್ಕಿ ಎಎಸ್ಐ ಹುಲಗಪ್ಪ, ದೈಹಿಕ ಶಿಕ್ಷಣ ಶಿಕ್ಷಕ ಎಸ್.ಎನ್ ಅಕ್ಕಿ, ರಮೇಶ ದೀಕ್ಷಿತ್, ಮಹಾಂತೇಶ ಚಲವಾದಿ ಇದ್ದರು.

ಆಧುನೀಕರಣದ ನಡುವೆಯೂ ಕನ್ನಡವು ತನ್ನತನ ಉಳಿಸಿಕೊಂಡಿದೆ. ಎಲ್ಲರೂ ತಮ್ಮ ಮಾತೃ ಭಾಷೆ ಗೌರವಿಸಬೇಕು. ಕನ್ನಡ ಭಾಷೆ ಬಳಕೆಗೆ ಹೆಚ್ಚಿನ ಆದ್ಯತೆ ನೀಡಬೇಕು
ಜಿಲಾನಿ ಪಾಷಾ ಅಧ್ಯಕ್ಷ ಕರವೇ ಲಿಂಗಸುಗೂರು ತಾಲ್ಲೂಕು ಘಟಕ
ಹಿಂದಿನಿಂದಲೂ ಕರ್ನಾಟಕ ರಕ್ಷಣಾ ವೇದಿಕೆ ನಾಡು–ನುಡಿ ನೆಲ–ಜಲದ ರಕ್ಷಣೆಗೆ ಹೋರಾಟ ನಡೆಸುತ್ತ ಬಂದಿದೆ. ಕನ್ನಡ ನಿತ್ಯೋತ್ಸವವಾದರೇ ಮಾತ್ರ ಕನ್ನಡದ ಉಳಿವು ಸಾಧ್ಯ
ಕರವೇ ಮುದಗಲ್ ಘಟಕದ ಅಧ್ಯಕ್ಷ ಎಸ್.ಎ.ನಯೀಂ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.