ADVERTISEMENT

ರಾಯಚೂರು ಜಿಲ್ಲೆಯಲ್ಲಿ ಮುಂದುವರಿದ ಮಳೆ: ಮಸ್ಕಿ ಜಲಾಶಯದಿಂದ ನೀರು ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2025, 3:22 IST
Last Updated 27 ಸೆಪ್ಟೆಂಬರ್ 2025, 3:22 IST
<div class="paragraphs"><p>ರಾಯಚೂರು ಜಿಲ್ಲೆಯ ಮಸ್ಕಿ ಹಿರೆ ಹಳ್ಳದ ಜಲಾಯಶದಿಂದ ನೀರು ಹೊರಗೆ ಬಿಡಲಾಗಿದೆ  </p><p></p></div>

ರಾಯಚೂರು ಜಿಲ್ಲೆಯ ಮಸ್ಕಿ ಹಿರೆ ಹಳ್ಳದ ಜಲಾಯಶದಿಂದ ನೀರು ಹೊರಗೆ ಬಿಡಲಾಗಿದೆ

   

ರಾಯಚೂರು: ಜಿಲ್ಲೆಯಲ್ಲಿ ಸಾಧಾರಣ ಮಳೆ ಮುಂದುವರಿದಿದೆ. 24 ಗಂಟೆಗಳ ಅವಧಿಯಲ್ಲಿ ರಾಯಚೂರಲ್ಲಿ 50 ಮಿ.ಮೀ ಮಳೆಯಾಗಿದೆ. ಸಿಂಧನೂರು, ಮಾನ್ವಿ, ಲಿಂಗಸುಗೂರು, ಹಟ್ಟಿ ಚಿನ್ನದ ಗಣಿ ಪ್ರದೇಶದಲ್ಲಿ ಮಳೆ ಸುರಿಯುತ್ತಿದೆ.

ADVERTISEMENT

ಮಸ್ಕಿ ತಾಲ್ಲೂಕಿನ ಮಸ್ಕಿ ಜಲಾಶಯಕ್ಕೆ ಹೆಚ್ಚಿನ ನೀರು ಬರುತ್ತಿದ್ದರಿಂದ ಶನಿವಾರ ಬೆಳಿಗ್ಗೆ ನಾಲ್ಕು ಗೇಟ್‌ಗಳ‌ ಮೂಲಕ ಹೆಚ್ಚಿನ ನೀರನ್ನು ಮಸ್ಕಿಯ ಹಿರೇ ಹಳ್ಳಕ್ಕೆ ಬಿಡಲಾಗಿದೆ. ಹಳ್ಳ ತುಂಬಿ ಹರಿಯುತ್ತಿದೆ. ಪ್ರವಾಹದ ಬೀತಿ ಉಂಟಾಗಿದೆ.‌

‘ಹಳ್ಳದ ದಂಡೆಯ ಗ್ರಾಮಗಳಿಗೆ ಹಳ್ಳದಲ್ಲಿ ಇಳಿಯದಂತೆ ಶನಿವಾರ ಬೆಳಿಗ್ಗೆ ಎಚ್ಚರಿಕೆ ನೀಡಲಾಗಿದೆ’ ಎಂದು ತಹಶೀಲ್ದಾರ್ ಮಂಜುನಾಥ ಬೋಗಾವತಿ ಪ್ರಜಾವಾಣಿಗೆ ತಿಳಿಸಿದ್ದಾರೆ.

ಮಳೆಗೆ ಬೆಟ್ಟದಿಂದ ಹರಿದು ಬಂದ ನೀರು ಮಸ್ಕಿಯ ಬಸವೇಶ್ವರ ನಗರಕ್ಕೆ ನುಗ್ಗಿದೆ. ಕಾಂಗ್ರೆಸ್, ಬಿಜೆಪಿ ಹಾಗೂ ತಹಶೀಲ್ದಾರ್ ಕಚೇರಿ ಸುತ್ತಮುತ್ತ ನೀರು ನಿಂತು ಕೆರೆಯಂತಾಗಿದೆ. ಬಸವೇಶ್ವರ ನಗರದಲ್ಲಿ ನಿವಾಸಿಗಳು ಬೆಳಿಗ್ಗೆ ನಿತ್ಯದ ಕೆಲಸಗಳಿಗೆ ಹೋಗಲು ಪರದಾಡುವಂತಾಯಿತು.

ವಾಲ್ಮೀಕಿ ನಗರ, ಸೋಮನಾಥ ನಗರ, ಗಾಂಧಿ ನಗರ ಸೇರಿದಂತೆ ವಿವಿದ ತಗ್ಗು ಪ್ರದೇಶಗಳಲ್ಲಿ ಮಳೆ ನೀರು ಮಳಿಗೆಳಿಗೆ ನುಗ್ಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.