ಮಸ್ಕಿ: ಪಟ್ಟಣದ 1ನೇ ವಾರ್ಡ್‌ನ ಬಸವೇಶ್ವರ ನಗರದಲ್ಲಿ ಅಮೃತ 2.0 ಕುಡಿಯುವ ನೀರಿನ ಪೈಪ್‌ಲೈನ್ ಕಾಮಗಾರಿಯಿಂದಾಗಿ ಹಾಳಾಗಿದ್ದ ರಸ್ತೆಗಳನ್ನು ಸ್ಥಳೀಯ ನಿವಾಸಿಗಳ ಸಹಕಾರದೊಂದಿಗೆ ಪುರಸಭೆ ಆಡಳಿತ ಗುರುವಾರ ಮರ್ಮ್ ಹಾಕಿ ಅಭಿವೃದ್ಧಿಪಡಿಸಿತು.
ಪುರಸಭೆಯಿಂದ ಮರ್ಮ್ ಹಾಕಿದರೆ ಸ್ಥಳೀಯ ನಿವಾಸಿಗಳು ಟ್ರ್ಯಾಕ್ಟರ್‌ನಿಂದ ಹಾಕಿದ ಮರ್ಮ್ ಅನ್ನು ಸಮತಟ್ಟು ಮಾಡಿದರು.
ಪುರಸಭೆ ಅಧ್ಯಕ್ಷ ಮಲ್ಲಯ್ಯ ಅಂಬಾಡಿ ಬೇಟಿ ನೀಡಿ ಪರಿಶೀಲಿಸಿದರು. ಬರುವ ದಿನಗಳಲ್ಲಿ ಬಸವೇಶ್ವರ ನಗರದ ಚರಂಡಿ ಹಾಗೂ ರಸ್ತೆಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಮುಖಂಡ ಬಸನಗೌಡ ಪೊಲೀಸ್ ಪಾಟೀಲ, ವೀರಭದ್ರಗೌಡ ಹಳೇಕೊಟೆ, ಪುರಸಭೆಯ ಸುನೀಲ್, ಹಜರ್, ರವಿಕುಮಾರ ಸಿಂಗ್ ಇದ್ದರು.
ಸತತವಾಗಿ ಸುರಿಯುತ್ತಿರುವ ಮಳೆಯಿಂದ ಅಮೃತ 2.0 ಕುಡಿಯುವ ನೀರಿನ ಪೈಪ್ ಲೈನ್ ಅಳವಡಿಸಲು ಅಗೆದ ರಸ್ತೆಗಳು ಕೆಸರು ಗದ್ದೆಗಳಾಗಿದ್ದವು. ಸವಳು ಮಣ್ಣು ಬಿದ್ದಿದ್ದರಿಂದ ಬೈಕ್ ಸವಾರರು ಪರದಾಡುತ್ತಿದ್ದರು. ವಾಹನಗಳು ಗುಂಡಿಯಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಿದ್ದವು. ಈ ಬಗ್ಗೆ ‘ಅಮೃತ 2.0 ಪೈಪ್ ಲೈನ್ ಕಾಮಗಾರಿ- ಹಾಳಾದ ರಸ್ತೆಗಳು’ ಶೀರ್ಷಿಕೆ ಅಡಿಯಲ್ಲಿ ಅ.13ರಂದು ಪ್ರಜಾವಾಣಿಯಲ್ಲಿ ಸುದ್ದಿ ಪ್ರಕಟವಾಗಿತ್ತು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.