ADVERTISEMENT

ಸಿಂಧನೂರು: ಮಾ.3 ರಂದು ‘ಯುವಕರ ನಡಿಗೆ ಪ್ರಗತಿಯ ಕಡೆಗೆ’ ಕಾಲ್ನಡಿಗೆ ಜಾಥಾ 

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2024, 13:43 IST
Last Updated 26 ಫೆಬ್ರುವರಿ 2024, 13:43 IST

ಸಿಂಧನೂರು: ‘ಯುವಕರ ನಡಿಗೆ ಪ್ರಗತಿಯ ಕಡೆಗೆ’ ಎಂಬ ಘೋಷವಾಕ್ಯದಡಿ ಮಾರ್ಚ್ 3 ರಂದು ನಗರದ ಮಿನಿ ವಿಧಾನಸೌಧ ಕಚೇರಿಯಿಂದ ತಾಲ್ಲೂಕು ಕ್ರೀಡಾಂಗಣದವರೆಗೆ ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳಲಾಗಿದೆ
ಎಂದು ಸಾಲಿಡಾರಿಟಿ ಯೂತ್ ಮೂವ್‍ಮೆಂಟ್‌ನ ಅಧ್ಯಕ್ಷ ವಸೀಮ್ ಅಹ್ಮದ್ ತಿಳಿಸಿದ್ದಾರೆ.

ಸೋಮವಾರ ಹೇಳಿಕೆ ನೀಡಿರುವ ಅವರು,‘ಭಾರತ ದೇಶದಲ್ಲಿ 142 ಕೋಟಿ ಜನಸಂಖ್ಯೆ ಇದ್ದು, ಅದರಲ್ಲಿ 67 ಕೋಟಿಯಷ್ಟು ಯುವಜನರಿದ್ದಾರೆ. ಪ್ರಪಂಚದಲ್ಲಿ ಅತಿ ಹೆಚ್ಚು ಯುವಜನರಿಂದ ತುಂಬಿದ ರಾಷ್ಟ್ರ ಭಾರತವಾಗಿದೆ. ಆದರೆ ಇಂದು ಯುವಜನರಿಗೆ ಹಲವಾರು ಸಮಸ್ಯೆ ಮತ್ತು ತೊಂದರೆಗಳಿವೆ. ನಿರುದ್ಯೋಗ, ಬಡತನ, ಮದ್ಯಪಾನ, ಡ್ರಗ್ಸ್, ಆರೋಗ್ಯದ ಸಮಸ್ಯೆಗಳು ಮತ್ತು ಮಾನಸಿಕ ಒತ್ತಡಗಳಿಗೆ ಒಳಗಾಗುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ’ ಎಂದು ವಿವರಿಸಿದ್ದಾರೆ.

ಇಂಥ ಪರಿಸ್ಥಿತಿಯಲ್ಲಿ ಯುವಕರು ಎದೆಗುಂದದೆ ತಮ್ಮ ಜೀವನವನ್ನು ತಾವೇ ಸೃಷ್ಟಿಸಿಕೊಳ್ಳುತ್ತಾ ಸ್ವಾವಲಂಬಿ ಬದುಕಿನ ಕಡೆಗೆ ಹಾಗೂ ವ್ಯಾಪಾರ–ಉದ್ಯಮದ ಕಡೆಗೆ ಅಣಿಯಾಗುತ್ತಿದ್ದಾರೆ. ಆದರೂ ಇಂದಿನ ಯುವಜನರಿಗೆ ಮಾರ್ಗದರ್ಶನದ ಅವಶ್ಯಕತೆ ಇದ್ದು, ಈ ಉದ್ದೇಶಕ್ಕಾಗಿ ಸಾಲಿಡಾರಿಟಿ ಯೂತ್ ಮೂವ್‍ಮೆಂಟ್ ವತಿಯಿಂದ ಮಾ.3 ರಂದು ಕಾಲ್ನಡಿಗೆ ಜಾಥಾ ನಡೆಸಲಾಗುತ್ತಿದೆ. ಕಾರಣ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.