
ಪ್ರಜಾವಾಣಿ ವಾರ್ತೆಮಾನ್ವಿ: ಪಟ್ಟಣದ ಬಸವ ವೃತ್ತದ ಹತ್ತಿರ ಇರುವ ದ ಶ್ರೀ ಲಕ್ಷ್ಮೀ ವೆಂಕಟೇಶ್ವರ ಪೇಂಟ್ಸ್ ಅಂಗಡಿಗೆ ಶುಕ್ರವಾರ ಬೆಳಗಿನ ಜಾವ ಆಕಸ್ಮಿಕವಾಗಿ ಅಗ್ನಿ ಅನಾಹುತ ಸಂಭವಿಸಿದೆ.
ಲಕ್ಷಾಂತರ ಮೌಲ್ಯದ ವಿವಿಧ ಕಂಪನಿಗಳ ಪೇಂಟ್ಸ್ ಸೇರಿದಂತೆ ಅಂಗಡಿಯಲ್ಲಿನ ವಸ್ತುಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ.
ಅಗ್ನಿಶಾಮಕ ಠಾಣೆಯ ಸಿಬ್ಬಂದಿಗಳು ಕೂಡಲೇ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿದರು ಎಂದು ಅಂಗಡಿ ಮಾಲೀಕ ಬಿಚ್ಚಾಲಿ ವೀರೇಶ ಬಾಬು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.