ADVERTISEMENT

‘ಔಷಧಗಳ ಮಾಹಿತಿ ಪಡೆದು ಸಹಕಾರ ನೀಡಬೇಕು’

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2019, 14:19 IST
Last Updated 28 ಸೆಪ್ಟೆಂಬರ್ 2019, 14:19 IST
ರಾಯಚೂರಿನಲ್ಲಿ ಈಚೆಗೆ ಆಯೋಜಿಸಿದ್ದ ಫಾರ್ಮಾಸಿಸ್ಟ್ ದಿನಾಚರಣೆಯನ್ನು ನವೋದಯ ಶಿಕ್ಷಣ ಸಂಸ್ಥೆಯ ಕುಲಸಚಿವ ಡಾ.ಟಿ.ಶ್ರೀನಿವಾಸ ಉದ್ಘಾಟಿಸಿದರು
ರಾಯಚೂರಿನಲ್ಲಿ ಈಚೆಗೆ ಆಯೋಜಿಸಿದ್ದ ಫಾರ್ಮಾಸಿಸ್ಟ್ ದಿನಾಚರಣೆಯನ್ನು ನವೋದಯ ಶಿಕ್ಷಣ ಸಂಸ್ಥೆಯ ಕುಲಸಚಿವ ಡಾ.ಟಿ.ಶ್ರೀನಿವಾಸ ಉದ್ಘಾಟಿಸಿದರು   

ರಾಯಚೂರು: ವಿದ್ಯಾರ್ಥಿಗಳು ಅಭ್ಯಾಸ ಮಾಡುವ ಅವಧಿಯಲ್ಲಿ ಔಷಧಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು, ಸಮಾಜಕ್ಕೆ ಹಾಗೂ ರೋಗಿಗಳಿಗೆ ಸಹಕಾರ ಮಾಡಬೇಕು ಎಂದು ನವೋದಯ ಶಿಕ್ಷಣ ಸಂಸ್ಥೆಯ ಕುಲಸಚಿವ ಡಾ.ಟಿ.ಶ್ರೀನಿವಾಸ ಹೇಳಿದರು.

ನಗರದ ನವೋದಯ ಶಿಕ್ಷಣ ಸಂಸ್ಥೆಯ ಡಾ.ಗುರುಮೂರ್ತಿ ಸಭಾಂಗಣದಲ್ಲಿ ಈಚೆಗೆ ಆಯೋಜಿಸಿದ್ದ ಫಾರ್ಮಾಸಿಸ್ಟ್‌ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಬಿ ಫಾರ್ಮ್‌ ವಿದ್ಯಾರ್ಥಿಗಳು ಅಭ್ಯಾಸದ ಜೊತೆಗೆ ಔಷಧ ಕೇಂದ್ರದಲ್ಲಿ ಕೆಲಸ ಮಾಡುವ ಮೂಲಕ ಪ್ರಾಯೋಗಿಕ ಜ್ಞಾನ ಪಡೆದುಕೊಳ್ಳಬೇಕು ಎಂದರು.

ADVERTISEMENT

ಪ್ರಾಧ್ಯಾಪಕ ಡಾ.ಸರಫರಾಜ್‌ ಮಾತನಾಡಿ, ರೋಗಿಗಳಿಗೆ ಔಷಧಗಳನ್ನು ನೀಡುವಾಗ ಬಹಳಷ್ಟು ಎಚ್ಚರಿಕೆ ವಹಿಸಬೇಕು. ಔಷಧಗಳ ಬಳಕೆಯ ವಿಧಾನ ಹಾಗೂ ದುಷ್ಪರಿಣಾಮ ಬಗ್ಗೆ ತಿಳಿದುಕೊಳ್ಳಬೇಕು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಫಾರ್ಮಸಿ ಕಾಲೇಜಿ ಪ್ರಾಚಾರ್ಯ ಡಾ.ಎಚ್.ದೊಡ್ಡಯ್ಯ ಮಾತನಾಡಿದರು. ಡಾ.ಟಿ.ಶಿವರಾಜಗೌಡ ಪ್ರತಿಜ್ಞಾ ವಿಧಿ ಬೋಧಿಸಿದರು.

ಮೆಡಿಕಲ್ ಕಾಲೇಜಿನ ಪ್ರಾಚಾರ್ಯ ಡಾ.ವಿಜಯಚಂದ್ರ ಇದ್ದರು. ಚಂದ್ರಮೌಳಿ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.