ADVERTISEMENT

ಪೊದೆಗೆ ನುಗ್ಗಿದ ಪೊಲೀಸ್‌ ಜೀಪ್‌!

​ಪ್ರಜಾವಾಣಿ ವಾರ್ತೆ
Published 21 ಜನವರಿ 2021, 15:43 IST
Last Updated 21 ಜನವರಿ 2021, 15:43 IST
ರಾಯಚೂರು ತಾಲ್ಲೂಕು ಮುರಾನಪುರ ಬಳಿಕ ಪೊಲೀಸ್‌ ಜೀಪ್‌ ಮುಳ್ಳಿನ ಪೊದೆಗೆ ನುಗ್ಗಿದ ಘಟನೆ ಗುರುವಾರ ನಡೆದಿದೆ
ರಾಯಚೂರು ತಾಲ್ಲೂಕು ಮುರಾನಪುರ ಬಳಿಕ ಪೊಲೀಸ್‌ ಜೀಪ್‌ ಮುಳ್ಳಿನ ಪೊದೆಗೆ ನುಗ್ಗಿದ ಘಟನೆ ಗುರುವಾರ ನಡೆದಿದೆ   

ರಾಯಚೂರು: ಗ್ರಾಮೀಣ ಠಾಣೆಯ ಪೊಲೀಸರು ಸಂಚರಿಸುತ್ತಿದ್ದ ಜೀಪ್‌ ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ಪಕ್ಕದ ಇಳಿಜಾರಿನಲ್ಲಿ ಮುಳ್ಳಿನ ಪೊದೆಗೆ ನುಗ್ಗಿದ ಘಟನೆ ತಾಲ್ಲೂಕಿನ ಮುರಾನಪುರ ಗ್ರಾಮದ ಬಳಿ ಗುರುವಾರ ನಡೆದಿದೆ.

ಅದೃಷ್ಟವಶಾತ್‌ ಗ್ರಾಮೀಣ ಠಾಣೆಯ ಸಿಪಿಐ ಹನುಮರೆಡ್ಡಿ ಸೇರಿ ಕಾನ್‌ಸ್ಟೇಬಲ್‌ಗಳು ಅಪಾಯದಿಂದ ಪಾರಾಗಿದ್ದಾರೆ.

ವಾಹನವು ಜಖಂಗೊಂಡಿದ್ದು, ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ತಿಳಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.