ಕವಿತಾಳ: ‘ಸರ್ಕಾರಿ ಕೆಲಸದ ಜೊತೆಗೆ ಶೈಕ್ಷಣಿಕ, ಸಾಂಸ್ಕೃತಿಕ, ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಬ್ರ್ಯಾಂಚ್ ಪೋಸ್ಟ್ ಮಾಸ್ಟರ್ ಪಿ.ವೆಂಕಟೇಶ ಅವರು ಸಮಾಜ ಗುರುತಿಸುವಂಥ ಸೇವೆ ಮಾಡಿದ್ದಾರೆ’ ಎಂದು ಶಿವಯ್ಯ ತಾತ ಬಳ್ಳಾರಿ ಹೇಳಿದರು.
ಬಾಗಲವಾಡ ಗ್ರಾಮದ ಬ್ರ್ಯಾಂಚ್ ಪೋಸ್ಟ್ ಮಾಸ್ಟರ್ ಪಿ.ವೆಂಕಟೇಶ ಅವರ ನಿವೃತ್ತಿ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಹಾಗೂ ಸನ್ಮಾನ ಸಮಾರಂಭದ ಮಾತನಾಡಿದರು.
ಅಂಚೆ ಇಲಾಖೆಯ ಯಾದಗಿರಿ ವಿಭಾಗದ ಎಸ್.ಪಿ. ಕೃಷ್ಣ ಮೊಹಿತೆ ಮಾತನಾಡಿ,‘ಆಧುನಿಕ ಯುಗದಲ್ಲಿ ತಂತ್ರಜ್ಞಾನದ ಬೆಳವಣಿಗೆಯಿಂದ ಹಳ್ಳಿ ಹಳ್ಳಿಗಳಲ್ಲೂ ಅಂಚೆ ಸೇವೆ ಸಲ್ಲಿಸುವುದು ಸುಲಭ ಸಾಧ್ಯವಾಗಿದೆ. ಮೂರು ದಶಕಗಳ ಹಿಂದೆ ಅಂಚೆ ಸೇವೆ ಒದಗಿಸುವುದು ಸವಾಲಿನ ಕೆಲಸವಾಗಿತ್ತು’ ಎಂದರು.
ಮುಖಂಡರಾದ ಕೃಷ್ಣಪ್ಪ ನಾಯಕ, ಸಿಂಧನೂರು ಉಪ ವಿಭಾಗದ ಅಂಚೆ ನಿರೀಕ್ಷಕ ರವೀಂದ್ರ ನಾಯಕ, ಮಲ್ಲಿಕಾರ್ಜುನ, ಬಸವರಾಜಯ್ಯ ಸ್ವಾಮಿ ಹಿರೇಮಠ, ಮೆಹಬೂಬ ಸಾಬ್, ಕೃಷ್ಣ ಸಿರವಾರ, ವೆಂಕಣ್ಣ, ರಾಮನಗೌಡ, ದೇವರಾಜ ಮತ್ತು ಪಿ.ವೆಂಕಟೇಶ ಉಪಸ್ಥಿತರಿದ್ದರು.
ಇಲಾಖೆ ಅಧಿಕಾರಿಗಳು ಸೇರಿದಂತೆ ಸಾರ್ವಜನಿಕರು, ಸಂಘ–ಸಂಸ್ಥೆಗಳ ಮುಖ್ಯಸ್ಥರು ಪಿ.ವೆಂಕಟೇಶ ಅವರನ್ನು ಸನ್ಮಾನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.