ADVERTISEMENT

ಲಿಂಗಸುಗೂರು | ಮೌಲ್ಯಯುತ ಸುದ್ದಿಗಳಿಗೆ ಆದ್ಯತೆ ನೀಡಿ: ಶರಣಗೌಡ ಪಾಟೀಲ ಬಯ್ಯಾಪುರ

​ಪ್ರಜಾವಾಣಿ ವಾರ್ತೆ
Published 26 ಜನವರಿ 2026, 8:12 IST
Last Updated 26 ಜನವರಿ 2026, 8:12 IST
ಲಿಂಗಸುಗೂರು ಪತ್ರಿಕಾ ಭವನದ ಮೊದಲ ಮಹಡಿಯಲ್ಲಿ ಸಭಾಭವನ ನಿರ್ಮಾಣಕ್ಕೆ ವಿಧಾನ ಪರಿಷತ್ ಸದಸ್ಯ ಶರಣಗೌಡ ಪಾಟೀಲ ಬಯ್ಯಾಪುರ ಹಾಗೂ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಗುರುನಾಥ ಭೂಮಿಪೂಜೆ ನೆರವೇರಿಸಿದರು.
ಲಿಂಗಸುಗೂರು ಪತ್ರಿಕಾ ಭವನದ ಮೊದಲ ಮಹಡಿಯಲ್ಲಿ ಸಭಾಭವನ ನಿರ್ಮಾಣಕ್ಕೆ ವಿಧಾನ ಪರಿಷತ್ ಸದಸ್ಯ ಶರಣಗೌಡ ಪಾಟೀಲ ಬಯ್ಯಾಪುರ ಹಾಗೂ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಗುರುನಾಥ ಭೂಮಿಪೂಜೆ ನೆರವೇರಿಸಿದರು.   

ಲಿಂಗಸುಗೂರು: ‘ಮೌಲ್ಯಯುತ ಸುದ್ದಿಗೆ ಆದ್ಯತೆ ನೀಡಿದರೆ, ಪತ್ರಿಕೆಯ ಗೌರವ ಹೆಚ್ಚುತ್ತದೆ. ಜನರ ನಿರೀಕ್ಷೆಗೆ ತಕ್ಕಂತೆ ಸುದ್ದಿ ನೀಡಿ ಸಮಾಜ ಪರಿವರ್ತನೆ ಮಾಡಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಶರಣಗೌಡ ಪಾಟೀಲ ಬಯ್ಯಾಪುರ ಹೇಳಿದರು.

ವಿಧಾನ ಪರಿಷತ್ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯ ಅನುದಾನ ಹಾಗೂ ಬಿ.ಎ. ನಂದಿಕೋಲಮಠ ಕುಟಂಬದವರ ನೆರವಿನೊಂದಿಗೆ ಪಟ್ಟಣದ ಪತ್ರಿಕಾಭವನದ ಮೊದಲ ಮಹಡಿಯ ಸಭಾಭವನ ನಿರ್ಮಾಣ ಮುಂದುವರಿದ ಕಾಮಗಾರಿಗೆ ಮಂಗಳವಾರ ಭೂಮಿಪೂಜೆ ಹಾಗೂ ಬಿ ಎ ನಂದಿಕೋಲಮಠ ಅವರ ಪ್ರಥಮ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ‌‘ಪತ್ರಿಕಾರಂಗ ಓರೆ, ಕೋರೆ ತಿದ್ದುವ ಮೂಲಕ ಸಮಾಜಕ್ಕೆ ಮಾರ್ಗದರ್ಶನವಾಗಿದೆ. ಅಗತ್ಯ ಸಹಕಾರ ನೀಡಲಾಗುವುದು’ ಎಂದು ಹೇಳಿದರು.

ಪತ್ರಕರ್ತ ಸಂಘದ ಜಿಲ್ಲಾ ಅಧ್ಯಕ್ಷ ಆರ್.ಗುರುನಾಥ ಮಾತನಾಡಿದರು. ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಭೂಪನಗೌಡ ಕರಡಕಲ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಪಾಮಯ್ಯ ಮುರಾರಿ, ಶಿವಕುಮಾರ ನಂದಿಕೋಲಮಠ, ಪತ್ರಕರ್ತ ಗುರುರಾಜ ಮುತಾಲಿಕ, ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದಯ್ಯಸ್ವಾಮಿ ಕುಕನೂರು, ತಾಲ್ಲೂಕು ಘಟಕದ ಅಧ್ಯಕ್ಷ ಶಿವರಾಜ ಕೆಂಭಾವಿ, ಪ್ರಧಾನ ಕಾರ್ಯದರ್ಶಿ ಗಂಗಾಧರ ನಾಯಕ, ಜಿಲ್ಲಾ ಕಾರ್ಯದರ್ಶಿ ರಾಘವೇಂದ್ರ ಗುಮಾಸ್ತೆ, ಘನಮಠದಯ್ಯ ಸಂತೆಕೆಲ್ಲೂರು, ನಾಗರಾಜ ಮಸ್ಕಿ, ರವಿಕುಮಾರ ಹೊಸಮನಿ, ಅಮರೇಶಸ್ವಾಮಿ ಬಲ್ಲಟಗಿ, ಅಮರೇಶ ಕಲ್ಲೂರು ಇನ್ನಿತರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.