ADVERTISEMENT

‘ಪ್ರಮಾಣಪತ್ರ ನೀಡದಿದ್ದರೆ ಉಪವಾಸ ಸತ್ಯಾಗ್ರಹ’

ವೀರಶೈವ ಬೇಡ ಜಂಗಮ ತಾಲ್ಲೂಕು ಘಟಕದ ನೇತೃತ್ವದಲ್ಲಿ ಧರಣಿ

​ಪ್ರಜಾವಾಣಿ ವಾರ್ತೆ
Published 7 ಜುಲೈ 2022, 5:03 IST
Last Updated 7 ಜುಲೈ 2022, 5:03 IST
ಲಿಂಗಸುಗೂರಲ್ಲಿ ಬೇಡ ಜಂಗಮರ ಸತ್ಯ ಪ್ರತಿಪಾದನ ಹೋರಾಟ ಬೆಂಬಲಿಸಿ ಬೇಡಜಂಗಮ ಸಮುದಾಯದವರು ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು
ಲಿಂಗಸುಗೂರಲ್ಲಿ ಬೇಡ ಜಂಗಮರ ಸತ್ಯ ಪ್ರತಿಪಾದನ ಹೋರಾಟ ಬೆಂಬಲಿಸಿ ಬೇಡಜಂಗಮ ಸಮುದಾಯದವರು ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು   

ಲಿಂಗಸುಗೂರು: ಅಖಿಲ ಕರ್ನಾಟಕ ಬೇಡ ಜಂಗಮ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಬಿ.ಡಿ.ಹಿರೇಮಠ ನೇತೃತ್ವದಲ್ಲಿ ನಡೆಯುತ್ತಿರುವ ಬೇಡ ಜಂಗಮ ಸತ್ಯ ಪ್ರತಿಪಾದನ ಹೋರಾಟ ಬೆಂಬಲಿಸಿ ವೀರಶೈವ ಬೇಡ ಜಂಗಮ ತಾಲ್ಲೂಕು ಘಟಕದ ನೇತೃತ್ವದಲ್ಲಿ ಅನಿರ್ದಿಷ್ಟಾವಧಿ ಧರಣಿ ಆರಂಭಿಸಲಾಯಿತು.

ಉಪ ವಿಭಾಗಾಧಿಕಾರಿ ಕಚೇರಿ ತಹಶೀಲ್ದಾರ್ ಶಾಲಂಸಾಬ ಅವರಿಗೆ ಮನವಿ ಸಲ್ಲಿಸಲಾಯಿತು.

ಸಂವಿಧಾನದ ಕಲಂ 341ರಡಿ ರಾಜ್ಯದ ವೀರಶೈವ ಜಂಗಮರನ್ನು ಬೇಡ ಜಂಗಮರೆಂದು ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಸೇರ್ಪಡೆ ಮಾಡಲಾಗಿದೆ. ಸ್ಪಷ್ಟತೆ ಎಂಬಂತೆ ರಾಜ್ಯ ಸರ್ಕಾರ ಡಾ.ಸ್ವಾಮಿನಾಥನ್‍ ಕಾಮತ್‍ ಅಧ್ಯಕ್ಷತೆಯಲ್ಲಿ ರಚಿಸಿದ ಸಮಿತಿ ನಡೆಸಿದ ಸಮೀಕ್ಷಾ ವರದಿಯನ್ನು 1989ರ ಗೆಜೆಟ್‌ನಲ್ಲಿ ಪ್ರಕಟಿಸಿರುವುದು ಅಧಿಕೃತ ದಾಖಲೆಯಾಗಿ ಉಳಿದಿದೆ ಎಂದು ಹೇಳಿದರು.

ADVERTISEMENT

ಏಳು ದಶಕಗಳ ಅವಧಿಯಲ್ಲಿ ಅಧಿಕಾರಿಗಳು, ಆಡಳಿತದಲ್ಲಿದ್ದ ಸರ್ಕಾರಗಳು ಗೊಂದಲ ಸೃಷ್ಟಿಸುವ ಸುತ್ತೋಲೆ ಹೊರಡಿಸುತ್ತ ನಮ್ಮ ಸಮುದಾಯಕ್ಕೆ ಇಂದಿಗೂ ಪರಿಶಿಷ್ಟ ಜಾತಿ ಬೇಡ ಜಂಗಮ ಜಾತಿ ಪ್ರಮಾಣ ಪತ್ರ ದೊರಕದಂತೆ ಷಡ್ಯಂತ್ರ ರೂಪಿಸುತ್ತ ಬಂದಿವೆ ಎಂದು ದೂರಿದರು.ಮುಖ್ಯಮಂತ್ರಿಗಳು ಸೂಕ್ತ ಸುತ್ತೋಲೆ ಹೊರಡಿಸಲು ಮುಂದಾಗದೆ ಹೋದಲ್ಲಿ ಇಡೀ ಜಂಗಮ ಸಮುದಾಯ ಉಪವಾಸ ಸತ್ಯಾಗ್ರಹ ಆರಂಭಿಸಲಿದೆ ಎಂದು ಎಚ್ಚರಿಕೆ ನೀಡಿದರು. ಪ್ರಭುಸ್ವಾಮಿ ಅತ್ನೂರು, ಮಹಾದೇವಯ್ಯ ಗೌಡೂರು, ಶರಣಯ್ಯ ದಾಸೋಹಮಠ, ಶಿವಕುಮಾರ ನಂದಿಕೋಲಮಠ, ಬಸಯ್ಯ ಹಿರೇಮಠ, ವೀರಭದ್ರಯ್ಯ ಯಲಗಲದಿನ್ನಿ, ಶರಣಯ್ಯ ಹಿರೇಮಠ, ಚೆನ್ನಬಸವ ಹಿರೇಮಠ, ಎನ್‍.ಬಸವರಾಜ, ಗುರುಬಾಯಿ ಹಿರೇಮಠ, ಸುಹಾಸಿನಿ, ನಯನ, ವೀರಭದ್ರಯ್ಯ ಗುಂತಗೋಳ, ಅಮರೇಶ ಗಂಭೀರಮಠ, ಶೇಖರಯ್ಯ ಹೊನ್ನಳ್ಳಿ, ಈರಯ್ಯ ಗುರುಗುಂಟಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.