
ಕವಿತಾಳ: ಊರಿಗೆ ಹತ್ತಿರದಲ್ಲಿ ನರೇಗಾ ಕೆಲಸ ನೀಡುವಂತೆ ಆಗ್ರಹಿಸಿ ಸಮೀಪದ ಅಮೀನಗಡ ಗ್ರಾಮ ಪಂಚಾಯಿತಿ ಕಚೇರಿ ಎದುರು ಕೂಲಿ ಕಾರ್ಮಿಕರು ಬುಧವಾರ ಪ್ರತಿಭಟನೆ ನಡೆಸಿದರು.
‘ಗ್ರಾಮದಿಂದ ಎರಡು ಕಿ.ಮೀ ದೂರದ ಹುಲಿಗುಡ್ಡದಲ್ಲಿ ಕೆಲಸ ನೀಡಲಾಗುತ್ತಿದೆ. ಹೋಗಿ ಬರಲು ಸಮಯವಾಗುತ್ತಿದೆ. ಅಲ್ಲಿನ ಭೂಮಿ ಗಟ್ಟಿಯಾಗಿದ್ದು, ನಿಗದಿತ ಅಳತೆಯ ಕೆಲಸ ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಹತ್ತಿರದಲ್ಲಿ ಕೆಲಸ ನೀಡಬೇಕು ಅಥವಾ ಅಲ್ಲಿಗೆ ಹೋಗಿ ಬರುವುದಕ್ಕೆ ವಾಹನದ ವ್ಯವಸ್ಥೆ ಮಾಡಬೇಕು’ ಎಂದು ಕಾರ್ಮಿಕರಾದ ಈರಮ್ಮ, ಗಂಗಮ್ಮ, ಭಾಗಮ್ಮ, ಶಿವಮ್ಮ, ಖಾಜಾ ಸಾಬ್, ರಶೀದ್ ಸಾಬ್, ಶೇಖರಪ್ಪ, ಮಲ್ಲಯ್ಯ ಪೂಜಾರಿ, ಮಂಜುನಾಥ ಹಾಗೂ ಹಂಪಣ್ಣ ಆಗ್ರಹಿಸಿದರು.
‘ಪ್ರಸ್ತುತ ಸ್ಥಳದಲ್ಲಿ ಕೆಲಸ ಮಾಡಲು ತಾಂತ್ರಿಕವಾಗಿ ಅನುಮತಿಸಲಾಗಿದೆ. ಅದು ಪೂರ್ಣವಾಗದ ಹೊರತು ಬೇರೆ ಸ್ಥಳದಲ್ಲಿ ತಕ್ಷಣ ಕೆಲಸ ನೀಡಲು ಸಾಧ್ಯವಾಗುವುದಿಲ್ಲ. ಈ ಕುರಿತು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗುವುದು’ ಎಂದು ಅಭಿವೃದ್ದಿ ಅಧಿಕಾರಿ ತಿಪ್ಪಣ್ಣ ನಾಯಕ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.