ರಾಯಚೂರು: ನಾರಾಯಣಪುರ ಜಲಾಶಯದಿಂದ ಕೃಷ್ಣಾನದಿಗೆ ಹೊರಹರಿವು ಪ್ರಮಾಣವನ್ನು 2.2 ಲಕ್ಷ ಕ್ಯುಸೆಕ್ ಅಡಿಗೆ ಶನಿವಾರ ಹೆಚ್ಚಿಸಲಾಗಿದೆ.
ಇದುವರೆಗೂ 1.82 ಲಕ್ಷ ಕ್ಯುಸೆಕ್ ಅಡಿ ಪ್ರವಾಹ ಇತ್ತು. ಇದರಿಂದ ಲಿಂಗಸುಗೂರು ತಾಲ್ಲೂಕು ನಡುಗಡ್ಡೆ ಗ್ರಾಮ ಶೀಲಹಳ್ಳಿ ಸೇತುವೆ ಮುಳುಗಡೆ ಆಗಿ, ಸಂಪರ್ಕ ಕಡಿತವಾಗಿತ್ತು. ಇದೀಗ ಪ್ರವಾಹ ಹೆಚ್ಚಳದಿಂದ ಕಲಬುರ್ಗಿ- ರಾಯಚೂರು ಸಂಪರ್ಕಿಸುವ ದೇವದುರ್ಗ ತಾಲ್ಲೂಕಿನ ಹೂವಿನಹೆಡಗಿ ಸೇತುವೆ ಮುಳುಗುವ ಹಂತಕ್ಕೆ ತಲುಪಿದೆ.
ಪ್ರವಾಹವು 2.4 ಲಕ್ಷ ಕ್ಯುಸೆಕ್ ಅಡಿ ದಾಟಿದರೆ ಹೂವಿನಹೆಡಗಿ ಸೇತುವೆ ಸಂಪೂರ್ಣ ಮುಳುಗುತ್ತದೆ. ಇದೀಗ ಮುನ್ನಚ್ಚರಿಕೆ ಕ್ರಮವಾಗಿ ವಾಹನ ಸಂಚಾರವನ್ನು ಸ್ಥಗಿತ ಮಾಡುವ ಸಾಧ್ಯತೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.