ADVERTISEMENT

ರಾಯಚೂರು: ತಿಪ್ಪೆಯಲ್ಲಿ ಸರ್ಕಾರಿ ಆಸ್ಪತ್ರೆ ಔಷಧ ಪತ್ತೆ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2026, 19:40 IST
Last Updated 22 ಫೆಬ್ರುವರಿ 2026, 19:40 IST
ರಾಯಚೂರಿನಲ್ಲಿ ಭಾನುವಾರ ಸರ್ಕಾರಿ ಆಸ್ಪತ್ರೆಯ ಔಷಧಿಗಳು ಬಿಸಾಡಿದ ಸ್ಥಳಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಸುರೇಂದ್ರ ಬಾಬು ಭೇಟಿ ನೀಡಿ ಪರಿಶೀಲನೆ ನಡೆಸಿದರು
ರಾಯಚೂರಿನಲ್ಲಿ ಭಾನುವಾರ ಸರ್ಕಾರಿ ಆಸ್ಪತ್ರೆಯ ಔಷಧಿಗಳು ಬಿಸಾಡಿದ ಸ್ಥಳಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಸುರೇಂದ್ರ ಬಾಬು ಭೇಟಿ ನೀಡಿ ಪರಿಶೀಲನೆ ನಡೆಸಿದರು   

ರಾಯಚೂರು: ಇಲ್ಲಿನ ಜಲಾಲ್ ನಗರಕ್ಕೆ ಹೋಗುವ ರಸ್ತೆಯ ಸ್ಮಶಾನದ ಬಳಿ, ಅವಧಿ ಮುಗಿಯದ ಕೆಮ್ಮು, ನೆಗೆಡಿಯ ಟಾನಿಕ್, ಸಿರಿಂಜ್ ಸೇರಿ ಇತರೆ ಔಷಧಿಗಳನ್ನು ತಿಪ್ಪೆಯಲ್ಲಿ ಬಿಸಾಡಿದ್ದು, ಭಾನುವಾರ ಕಂಡುಬಂದಿದೆ.

ರಾಶಿ ರಾಶಿ ಸಿರಿಂಜ್, ಚಿಕ್ಕ ಮಕ್ಕಳ ಕೆಮ್ಮಿನ ಸಿರಪ್ ಕಂಡು ಸ್ಥಳೀಯ ಯುವಕರು ಆರೋಗ್ಯ ಇಲಾಖೆಯ ಗಮನಕ್ಕೆ ತಂದಿದ್ದಾರೆ.

ರಿಮ್ಸ್ ಆಸ್ಪತ್ರೆ, ನಮ್ಮ ಕ್ಲಿನಿಕ್ ಸೇರಿ ಸರ್ಕಾರಿ ಆಸ್ಪತ್ರೆಗಳಲ್ಲಿ ಹೊರ ರೋಗಿಗಳಿಗೆ ಔಷಧಿ ಹೊರಗೆ ಖರೀದಿಸಲು ಆಸ್ಪತ್ರೆಯ ವೈದ್ಯರು ಚೀಟಿ ಬರೆದು ಕೊಡುತ್ತಾರೆ. ಆದರೆ, ಸ್ಮಶಾನದ ಬಳಿ ತಿಪ್ಪೆಯಲ್ಲಿ ಔಷಧಿ ಬಿಸಾಕಿ ಹಾಳು ಮಾಡಿದ್ದು ಖಂಡನೀಯ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದರು.

ADVERTISEMENT

ಆರೋಗ್ಯಾಧಿಕಾರಿ ಭೇಟಿ: 

ವಿಷಯ ತಿಳಿದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಸುರೇಂದ್ರ ಬಾಬು ಔಷಧ ನಿಯಂತ್ರಕ ಅಧಿಕಾರಿಗಳು, ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.

ರಾಯಚೂರಿನಲ್ಲಿ ತಿಪ್ಪೆಯಲ್ಲಿ ಪತ್ತೆಯಾದ ಸರ್ಕಾರಿ ಆಸ್ಪತ್ರೆಯ ಔಷಧಿಗಳು

ಇಲ್ಲಿ ಬಿಸಾಡಿರುವ ಕಾಫ್ ಸಿರಪ್ ಫಿಜಿಷಿಯನ್ ಸ್ಯಾಂಪಲ್‌ ಅಂತಿದೆ. ಕೆಲವು ಬಯಾಲಾಜಿಕಲ್ ಲಿಮಿಟೆಡ್, ಸಿರಿಂಜ್ ಗವರ್ನಮೆಂಟ್ ಸಪ್ಲೈ ಅಂತಿದೆ. ಈ ಔಷಧಿಗಳು ಎಲ್ಲಿಂದ, ಹೇಗೆ ಬಂದಿದೆ ಎಂದು ತನಿಖೆ ನಡೆಸಲಾಗುತ್ತದೆ. ಸರ್ಕಾರಿ ಆಸ್ಪತ್ರೆಯಿಂದ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಬಳಿಕ ಆರೋಗ್ಯ ಇಲಾಖೆಯ ಸಿಬ್ಬಂದಿ ಚೀಲಗಳಲ್ಲಿ ಔಷಧಿಗಳನ್ನು ತುಂಬಿಕೊಂಡು ಹೋದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.