ದೇವದುರ್ಗ: ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಭಾವೈಕ್ಯತೆಯ ಸಂಕೇತವಾದ ಮೊಹರಂ ಹಬ್ಬವನ್ನು ಶನಿವಾರ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ಯುವಕರು ಭಕ್ತಿಯಿಂದ ಆಡುವ ‘ಭೌವಸೈ’(ಆಲಾಯಿ ಆಟ) ಮೂಲಕ ತಮ್ಮ ಹರಕೆ ಸಲ್ಲಿಸಿದರು. ಪಟ್ಟಣದ ತಪ್ಪರ ಗುಂಡಿ ಮಸೀದಿಯಲ್ಲಿ ವಿವಿಧ ಹಳ್ಳಿ ಯುವಕರು ಮಧ್ಯಾಹ್ನ ಮಳೆ ಲೆಕ್ಕಸಿದೆ ತಮಟೆ ಸದ್ದಿಗೆ ಹೆಜ್ಜೆ ಹಾಕಿದರು.
ಪಟ್ಟಣದ ದರ್ಬಾರ್ ರಸ್ತೆಯಲ್ಲಿ ಎಲ್ಲಾ ಆಲಂಗಳು ಒಟ್ಟಿಗೆ ಮೆರವಣಿಗೆ ಹೊರಟು ದರ್ಬಾರ್ ಮುಂಬಾಗದಲ್ಲಿ ದಫನ್ ಕಾರ್ಯ ನಡೆಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.