ರಾಯಚೂರು: ದಿನವಿಡೀ ಸಂಗ್ರಹಿಸಿದ ಸುದ್ದಿಗಳನ್ನು ಹೊತ್ತ ಪತ್ರಿಕೆ ಬೆಳಗಿನ ಚಹಾ ವೇಳೆಗೆ ಓದುಗರಿಗೆ ತಲುಪದಿದ್ದಲ್ಲಿ ಮಹತ್ವ ಕಳೆದುಕೊಳ್ಳುತ್ತದೆ. ವೃತ್ತಿ ಬದುಕಿನ ಮಧ್ಯೆ ಕೌಟುಂಬಿಕ ಕೆಲಸ ಕಾರ್ಯಗಳಿದ್ದರೂ ಮಳೆ, ಚಳಿ, ಬಿಸಿಲು ಎನ್ನದೇ ವರ್ಷಪೂರ್ತಿ ಓದುಗರಿಗೆ ಪತ್ರಿಕೆ ವಿತರಣೆ ಮಾಡುತ್ತಿರುವ ವಿತರಕರ ಕಾರ್ಯ ಅಷ್ಟೇ ಮಹತ್ವದ ಪಾತ್ರ ವಹಿಸಿದೆ.
ಪತ್ರಿಕೆ ವಿತರಕರ ವೃತ್ತಿ ಬದ್ಧತೆ ಇಂದಿಗೂ ಓದುಗರನ್ನು ಹಿಡಿದಿಡುವಂತೆ ಮಾಡಿದೆ. ಹಿಂದಿನ ದಿನದ ಸುದ್ದಿಗಳನ್ನು ಸಂಗ್ರಹಿಸಿದ ವಿವರಗಳುಳ್ಳ ಪತ್ರಿಕೆಗಳನ್ನು ಅರುಣೋಯದ ವೇಳೆಗೆ ಮನೆ ಬಾಗಿಲಿಗೆ ತಲುಪಿಸುವುದು ಕಠಿಣ ಶ್ರಮದ ಮತ್ತು ಸಾರ್ಥಕ ಸೇವೆಯ ಕಾರ್ಯವೂ ಆಗಿದೆ.
ಬಿಸಿಲೂರಲ್ಲಿ ಮಳೆ ಬಂದಾಗ ರೇನ್‌ಕೋಟ್‌ಗಳನ್ನು ಧರಿಸಿ ಕಾಯಕಕ್ಕೆ ಇಳಿಯುವ ದೃಶ್ಯ ಕಾಣಸಿಗುವುದು ಅಪರೂಪ. ಅಲ್ಲದೇ ಮಳೆಗಾಲದಲ್ಲಿ ಮನೆಗಳಿಗೆ ಪತ್ರಿಕೆಗಳನ್ನು ತಲುಪಿಸುವುದು ಹೆಚ್ಚು ಸವಾಲಿನ ಕೆಲಸವಾಗಿರುತ್ತದೆ. ಕಚೇರಿಯಿಂದ ಬರುವ ಪತ್ರಿಕೆಗಳನ್ನು ಅಷ್ಟೇ ಸುರಕ್ಷಿತವಾಗಿ ಅವುಗಳನ್ನು ಮನೆಗಳಿಗೂ ತಲುಪಿಸಿ ಹೊಣೆಗಾರಿಕೆ ಪ್ರದರ್ಶಿಸುತ್ತಿದ್ದಾರೆ ವಿತರಕರು.
ಮೊಬೈಲ್ ಗೀಳು ಇಂದು ಯುವಪೀಳಿಗೆಯನ್ನು ಆಲಸ್ಯದೆಡೆಗೆ ದೂಡುತ್ತಿದೆ. ಆದರೆ, ಪತ್ರಿಕಾ ವಿತರಣೆ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಯುವಕರಿಗೆ ಸಮಯ ಪಾಲನೆ, ಬೆಳಿಗ್ಗೆ ಬೇಗ ಎದ್ದೇಳುವುದಕ್ಕೂ ದಾರಿ ಮಾಡಿಕೊಟ್ಟಿದೆ. ಸೈಕಲ್ ಪೈಡಲ್ ತುಳಿದು ಮನೆ ಮನೆಗೆ ಪೇಪರ್ ಹಾಕುತ್ತಿರುವ ಯುವಕರು ಹೆಚ್ಚು ಆರೋಗ್ಯಯುತವಾಗಿದ್ದಾರೆ.
ಕಾಲೇಜುಗಳಿಗೆ ಹೋಗುತ್ತಿರುವ ವಿದ್ಯಾರ್ಥಿಗಳು ಸಹ ಪತ್ರಿಕೆ ವಿತರಣೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಬೆಳಿಗ್ಗೆ ಒಂದೆರಡು ತಾಸು ಮಾಡುವ ಕೆಲಸಕ್ಕೆ ಒಳ್ಳೆಯ ಗೌರವಧನ ಪಡೆದು ಅದನ್ನು ಶಿಕ್ಷಣಕ್ಕೆ ಬಳಸಿಕೊಳ್ಳುತ್ತಿದ್ದಾರೆ.
ಹಲವು ವರ್ಷಗಳಿಂದ ಪತ್ರಿಕೆ ವಿತರಣೆಯಲ್ಲಿ ತೊಡಗಿಸಿಕೊಂಡವರು ಸಂಕಷ್ಟದ ಮಧ್ಯೆಯೂ ಸಂತೃಪ್ತಿಯ ಬದುಕು ಸಾಗಿಸಿದ್ದಾರೆ.ಸರ್ಕಾರ ಪತ್ರಿಕೆ ವಿತರಕರಿಗೆ ಅಗತ್ಯವಿರುವ ಆರೋಗ್ಯ ವಿಮೆ ಕ್ಷೇಮ ನಿಧಿ ಸ್ಥಾಪಿಸುವ ಜೊತೆಗೆ ಅವುಗಳಿಗೆ ಸರಳ ನಿಮಯಮಗಳನ್ನು ರೂಪಿಸಿ ವಿತರಕರ ಹಿತ ಕಾಯುವ ಅವಶ್ಯಕತೆ ಇದೆ ಬಸವರಾಜ ಪೂಜಾರಿ ಸಿರವಾರ
20 ವರ್ಷಗಳಿಂದ ಪತ್ರಿಕೆ ವಿತರಿಸುತ್ತಿದ್ದೇನೆ. ಜಗತ್ತಿನ ಆಗುಹೋಗುಗಳ ಸುದ್ದಿಹೊತ್ತು ಮನೆಮನೆಗಳಿಗೆ ತಲುಪಿಸಿ ಓದುಗರಿಗೆ ಪತ್ರಿಕೆ ವಿತರಿಸಿಯೇ ಬದುಕು ಕಟ್ಟಿಕೊಂಡಿದ್ದೇನೆ. ಸರ್ಕಾರ ನಮ್ಮನ್ನು ಗುರುತಿಸಿಲ್ಲ ಎನ್ನುವ ಬೇಸರವಿದೆವೆಂಕಟೇಶ ಮಾಡಗೇರಿ ಪತ್ರಿಕಾ ವಿತರಕ
ಕಳೆದ 10 ವರ್ಷಗಳಿಂದ ಪತ್ರಿಕೆ ವಿತರಕನಾಗಿ ಕೆಲಸ ಮಾಡುತ್ತಿದ್ದೇನೆ. ಬೆಳಿಗ್ಗೆ ಓದುಗರಿಗೆ ಸರಿಯಾಗಿ ಪತ್ರಿಕೆಗಳನ್ನು ತಲುಪಿಸುವ ಬದ್ಧತೆಯಲ್ಲಿ ಅನೇಕ ಸವಾಲುಗಳನ್ನು ನಿಭಾಯಿಸಿಕೊಂಡು ಕಾರ್ಯ ನಿರ್ವಹಿಸುತ್ತಿದ್ದೇನೆಚಂದ್ರೇಗೌಡ ಹೊನ್ನಹಳ್ಳಿ ಲಿಂಗಸುಗೂರು
1996ರಿಂದ ಕಾಲೇಜಿಗೆ ಹೋಗುತ್ತಿದ್ದ ದಿನಗಳಿಂದಲೇ ‘ಪ್ರಜಾವಾಣಿ’ ಪತ್ರಿಕೆ ವಿತರಿಸುತ್ತಿರುವೆ. ಪತ್ರಿಕೆ ಹಂಚುವ ಹುಡುಗರು ಕೈಕೊಡುವ ಕಾರಣ ಒಂದೊಮ್ಮೆ ಸಮಸ್ಯೆ ಆಗುತ್ತದೆ. ಓದಗರಿಗೆ ಸಮಯಕ್ಕೆ ಸರಿಯಾಗಿ ಪತ್ರಿಕೆ ಕೊಡುವುದನ್ನು ಮಾತ್ರ ನಿಲ್ಲಿಸಿಲ್ಲದತ್ತಾತ್ರೇಯ ರಾಯಚೂರು
ಅನೇಕ ವರ್ಷಗಳಿಂದ ವೃತ್ತಿಯಲ್ಲಿರುವ ಪತ್ರಿಕೆ ವಿತರಕರ ಸೇವೆಯನ್ನು ಪರಿಗಣಿಸಿ ರಾಜ್ಯ ಸರ್ಕಾರ ಬಸ್ ಪಾಸ್ ನಿವೇಶನಗಳನ್ನು ಕೊಡಬೇಕು. 72 ವಯಸ್ಸಿನ ನಮ್ಮಂಥವರ ನೆರವಿಗೆ ಬರಬೇಕು. ನಿವೃತ್ತಿ ವೇತನ ಕೊಡಬೇಕುಕೊಟ್ರಯ್ಯಸ್ವಾಮಿ ಸಿಂಧನೂರು
ಸರ್ಕಾರ ಪತ್ರಿಕೆ ವಿತರಕರಿಗೆ ಅಗತ್ಯವಿರುವ ಆರೋಗ್ಯ ವಿಮೆ ಕ್ಷೇಮ ನಿಧಿ ಸ್ಥಾಪಿಸುವ ಜೊತೆಗೆ ಅವುಗಳಿಗೆ ಸರಳ ನಿಮಯಮಗಳನ್ನು ರೂಪಿಸಿ ವಿತರಕರ ಹಿತ ಕಾಯುವ ಅವಶ್ಯಕತೆ ಇದೆಬಸವರಾಜ ಪೂಜಾರಿ ಸಿರವಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.