ADVERTISEMENT

ರಾಯಚೂರು: ಆಶುದ್ಧ ನೀರಿನಿಂದ ಮೃತಪಟ್ಟವರ ಕುಟುಂಬಕ್ಕೆ ಚೆಕ್‌ ವಿತರಣೆ

​ಪ್ರಜಾವಾಣಿ ವಾರ್ತೆ
Published 14 ಜೂನ್ 2022, 5:05 IST
Last Updated 14 ಜೂನ್ 2022, 5:05 IST
ಆಶುದ್ಧ ನೀರಿನಿಂದ ಮೃತಪಟ್ಟವರ ಕುಟುಂಬಕ್ಕೆ ಚೆಕ್‌ ವಿತರಣೆ
ಆಶುದ್ಧ ನೀರಿನಿಂದ ಮೃತಪಟ್ಟವರ ಕುಟುಂಬಕ್ಕೆ ಚೆಕ್‌ ವಿತರಣೆ   

ರಾಯಚೂರು: ನಗರದಲ್ಲಿ ಕಲುಷಿತ ನೀರು‌ ಸೇವನೆಯಿಂದ ಮೃತಪಟ್ಟ ಮೂರು ಜನ ಅವಲಂಬಿತರ ಕುಟುಂಬಕ್ಕೆ ಜಿಲ್ಲಾ ಉಸ್ತುವಾರಿ ಸಚಿವ‌ ಶಂಕರ ಪಾಟೀಲ ಮುನೇನಕೊಪ್ಪ‌ ಅವರು ನಗರಸಭೆಯ ₹10 ಲಕ್ಷ ಪರಿಹಾರ ಚೆಕ್ ಅನ್ನು ಮಂಗಳವಾರ ಹಸ್ತಾಂತರಿಸಿದರು.

ರಾಜ್ಯ ಸರ್ಕಾರದಿಂದಲೂ ₹5 ಲಕ್ಷ ಪರಿಹಾರ ಘೋಷಿಸಿದ್ದು, ಶೀಘ್ರದಲ್ಲೇ ಅದನ್ನೂ ಒದಗಿಸಲಾಗವುದು.‌ ಏನೇ ಪರಿಹಾರ ಒದಗಿಸಿದರೂ ಮೃತಪಟ್ಟವರ ಪ್ರಾಣ ತಂದುಕೊಡಲಾಗುವುದಿಲ್ಲ. ಈ ಮೂಲಕ ಅವಲಂಬಿತರಿಗೆ ಧೈರ್ಯ ತುಂಬುವ ಕೆಲಸವನ್ನು ನಗರಸಭೆ ಮಾಡಿರುವುದು ಅಭಿನಂದನೀಯ ಎಂದರು.

ಮೃತ ಮಲ್ಲಮ್ಮ ಪತಿ ಮುದುಕಪ್ಪ ಅವರಿಗೆ, ಮೃತ ಅಬ್ದುಲ್ ಗಫೂರ ತಾಯಿ ಅಮಿನಾ‌ಬೀ‌ ಅವರಿಗೆ ಹಾಗೂ ಮೃತ ನೂರ‌ ಮಹ್ಮದ್ ಸಹೋದರಿ ಕೈಕಶಾ ಅವರಿಗೆ ಪರಿಹಾರದ ಚೆಕ್ ನೀಡಲಾಯಿತು.

ADVERTISEMENT

ಸಂಸದ ರಾಜಾ ಅಮರೇಶ್ವರ ನಾಯಕ, ಶಾಸಕ ಡಾ.ಶಿವರಾಜ ಪಾಟೀಲ, ನಗರಸಭೆ ಅಧ್ಯಕ್ಷೆ ಲಲಿತಾ ಆಂಜನೇಯ ಕಡಗೋಲ, ಉಪಾಧ್ಯಕ್ಷೆ ನರಸಮ್ಮ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.