ADVERTISEMENT

‘ಕಲಾವಿದರ ಉತ್ತೇಜನಕ್ಕೆ ರಾಯಚೂರು ಉತ್ಸವ ನಡೆಯಲಿ’: ವಸಂತಕುಮಾರ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2025, 7:18 IST
Last Updated 18 ಆಗಸ್ಟ್ 2025, 7:18 IST
ರಾಯಚೂರಿನ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಕಲಾ ಸಂಕುಲ ಸಂಸ್ಥೆ ವತಿಯಿಂದ ಏರ್ಪಡಿಸಿದ್ದ ಸಂಗೀತೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಮಾಜಿ ಸಚಿವ ಕೆ.ಶಿವನಗೌಡ ನಾಯಕ ಹಾಗೂ ವಿಧಾನ ಪರಿಷತ್ ಸದಸ್ಯ ವಸಂತಕುಮಾರ ಜಂಟಿಯಾಗಿ ಉದ್ಘಾಟಿಸಿದರು
ರಾಯಚೂರಿನ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಕಲಾ ಸಂಕುಲ ಸಂಸ್ಥೆ ವತಿಯಿಂದ ಏರ್ಪಡಿಸಿದ್ದ ಸಂಗೀತೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಮಾಜಿ ಸಚಿವ ಕೆ.ಶಿವನಗೌಡ ನಾಯಕ ಹಾಗೂ ವಿಧಾನ ಪರಿಷತ್ ಸದಸ್ಯ ವಸಂತಕುಮಾರ ಜಂಟಿಯಾಗಿ ಉದ್ಘಾಟಿಸಿದರು   

ರಾಯಚೂರು: ‘ಜಿಲ್ಲೆಯಲ್ಲಿ ರಾಯಚೂರು ಉತ್ಸವ ನಡೆಸುವ ಅಗತ್ಯವಿದೆ. ಈ ದಿಸೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರೊಂದಿಗೆ ಸಮಾಲೋಚನೆ ನಡೆಸಲಾಗುವುದು‘ ಎಂದು ವಿಧಾನ ಪರಿಷತ್ ಸದಸ್ಯ ವಸಂತಕುಮಾರ ಹೇಳಿದರು.

ಕಲಾ ಸಂಕುಲ ಸಂಸ್ಥೆ ವತಿಯಿಂದ ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಏರ್ಪಡಿಸಿದ್ದ ಸಂಗೀತೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಜಿಲ್ಲೆಯಲ್ಲಿ ಬಹಳ ವರ್ಷಗಳಿಂದ ರಾಯಚೂರು ಉತ್ಸವ ಮಾಡಿಲ್ಲ. ಹಾಗಾಗಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಇದೇ ವರ್ಷದಲ್ಲಿ ಉತ್ಸವ ಮಾಡಲು ಪ್ರಯತ್ನಿಸಲಾಗುವುದು. ಇದರಿಂದ ಜಿಲ್ಲೆಯ ಸಾಹಿತ್ಯ ಸಂಗೀತ ಸಾಂಸ್ಕೃತಿಕ ಕಲಾವಿದರಿಗೆ ಉಪಯೋಗವಾಗಲಿದೆ’ ಎಂದು ತಿಳಿಸಿದರು.

ADVERTISEMENT

‘ಕಲಾ ಸಂಕುಲ ಸಂಸ್ಥೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಬಂದಿದೆ. ಸಂಸ್ಥೆಗೆ ರಾಜ್ಯೋತ್ಸವ ಪ್ರಶಸ್ತಿ ಕೊಡುವಂತೆ ಸರ್ಕಾರಕ್ಕೆ ಒತ್ತಾಯಿಸಲಾಗುವುದು‘ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಸಚಿವ ಕೆ.ಶಿವನಗೌಡ ನಾಯಕ ಮಾತನಾಡಿ, ‘ಜಿಲ್ಲೆಯಲ್ಲಿ ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿವೆ. ವಿವಿಧ ಕ್ಷೇತ್ರಗಳಲ್ಲಿನ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡುವ ಜವಾಬ್ದಾರಿಯುತ ಕಾರ್ಯವನ್ನು ಕಲಾ ಸಂಕುಲ ಸಂಸ್ಥೆ ಮಾತ್ರ ಮಾಡುತ್ತಿದೆ’ ಎಂದು ಬಣ್ಣಿಸಿದರು.

ಕೆಪಿಸಿಸಿ ಮಹಿಳಾ ಘಟಕದ ಉಪಾಧ್ಯಕ್ಷೆ ಶ್ರೀದೇವಿ ನಾಯಕ ಮಾತನಾಡಿ, ‘ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಯಾವತ್ತಿಗೂ ಜೊತೆಯಾಗಿರುತ್ತೇವೆ‘ ಎಂದು ಹೇಳಿದರು.

‘ಜನನಾಯಕ ಪ್ರಶಸ್ತಿ’ಯನ್ನು ಪಟೇಲ್ ತಲಮಾರಿ. ಚಂದ್ರಶೇಖರ ಗೌಸ್‌ನಗರ. ಸಮಾಜ ಸೇವಾ ರತ್ನ ಪ್ರಶಸ್ತಿಯನ್ನು ಲಕ್ಷ್ಮಣ ಯರಗೇರಾ, ಚಿಕ್ಕಸುಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಮತಾ ಅಂಬಯ್ಯ, ಬಿಜನಾಗೇರಾ ಗ್ರಾಮ ಪಂಚಾಯಿತಿ ಪಿಡಿಒ ಲಕ್ಷ್ಮಿಶ್ರೀಧರ ಪ್ಯಾಟೆ ಅವರಿಗೆ ಕೊಡಲಾಯಿತು.

ಗಾಯಕಿ ಕಲಾವತಿ ದಯಾನಂದ ಅವರು ‘ಯಾಕೆ ಬಡದಾಡ್ತಿ ತಮ್ಮ...., ಕಾಣದ ಕಡಲಿಗೆ...., ಒಳಿತು ಮಾಡು ಮನುಜ...., ಕುರುಡು ಕಾಂಚನ ಕುಣಿತಲಿತ್ತು. ಶ್ರಾವಣ ಬಂತು ಶ್ರಾವಣ ...ತಮ್ಮ ಹಾಡುಗಳ ಮೂಲಕ ಪ್ರೇಕ್ಷಕರನ್ನು ಮನರಂಜಿಸಿದರು.

ಕಲಾ ಸಂಕಲ ಸಂಸ್ಥೆಯ ಕಾರ್ಯದರ್ಶಿ ಮಾರುತಿ ಬಡಿಗೇರ ಹಾಗೂ ಬೆಳಕು ಟ್ರಸ್ಟ್ ಅಧ್ಯಕ್ಷ ಅಣ್ಣಪ್ಪ ಮೇಟಿಗೌಡ ನಿರೂಪಿಸಿದರು. ಶಾಂತಾ ಬಲ್ಲಟಗಿ ಪ್ರಾರ್ಥನಾ ಗೀತೆ ಹಾಡಿದರು.

ಕಲಾ ಸಂಕುಲ ಸಂಸ್ಥೆಯ ಸಂಸ್ಥಾಪಕಿ ರೇಖಾ ಬಡಿಗೇರ, ಬಿಜಿಪಿ ದೇವದುರ್ಗ ತಾಲ್ಲೂಕು ಘಟಕದ ಅಧ್ಯಕ್ಷ ಶರಣಬಸವ ಜೋಳದಹೆಡಗಿ, ಕೆಪಿಸಿಸಿ ಕಾರ್ಯದರ್ಶಿ ಕೆ. ಅಸ್ಲಾಂ ಪಾಶಾ, ಅಬ್ದುಲ್ ಕರೀಂ, ಶ್ರೀದೇವಿ ನಾಯಕ, ಚೆನ್ನಬಸವ ದದ್ದಲ್, ಶೋಭಾ ಯಾದವ, ನಿಜಾಮುದ್ದೀನ್, ಬಸವರಾಜ ಹೂಗಾರ, ನಾಗೇಂದ್ರಪ್ಪ ಮಟಮಾರಿ, ಹನುಮಂತರಾಯ ಕಾಕರಗಲ್, ಅಯ್ಯಣ್ಣ, ನರಸಣ್ಣ ವಡವಟ್ಟಿ ಆಂಜನೇಯ ವಡವಟಿ, ಮಲ್ಲೇಶಪ್ಪ ವಡವಟ್ಟಿ ಗಾಯಕರದ ಅಮರೇಗೌಡ, ಸುಧಾ ಪಾಟೀಲ, ಶಕುಂತಲಾ ಮಂಜುಳಾ, ಸಯ್ಯದ್ ವಲಿ, ಮೌನೇಶ್ ವಡವಟ್ಟಿ ಉಪಸ್ಥಿತರಿದ್ದರು.

ಸಂಘಟಕರಾದ ಮಾರುತಿ ಬಡಿಗೇರ ಹಾಗೂ ರೇಖಾ ಬಡಿಗೇರ ಸಾಹಿತ್ಯ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಯುವಜನಾಂಗಕ್ಕೆ ಪ್ರೇರಣೆಯಾಗಿದ್ದಾರೆ
ಕೆ.ಶಿವನಗೌಡ ನಾಯಕ ಮಾಜಿ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.