
ಪ್ರಜಾವಾಣಿ ವಾರ್ತೆ
ಜಾಲಹಳ್ಳಿ: ಸಮೀಪದ ಎಚ್. ಸಿದ್ದಾಪುರ ಗ್ರಾಮದಲ್ಲಿ ಈಚೆಗೆ ನಡೆದ ಗ್ರಾಮದೇವತೆ ಯಲ್ಲಮ್ಮ ದೇವಿಯ ಉತ್ಸವದ ಮೆರವಣಿ ವೇಳೆ ಗಾಳಿಯಲ್ಲಿ ಗುಂಡು ಹಾರಿಸಿದ್ದ ಯುವಕರನ್ನು ಬುಧವಾರ ಸಂಜೆ ಬಂಧಿಸಿಲಾಗಿದೆ ಎಂದು ಪಿಎಸ್ಐ ವೈಶಾಲಿ ಝಳಕಿ ತಿಳಿಸಿದ್ದಾರೆ.
ಮೌನೇಶ ನಾಯಕ, ಭೀಮಣ್ಣ ನಾಯಕ ಬಂಧಿತರು. ಈ ಇಬ್ಬರು ಬಂದೂಕುಗಳನ್ನು ಹಿಡಿದು ಗಾಳಿಯಲ್ಲಿ ಗುಂಡು ಹಾರಿಸಿದ ವಿಡಿಯೊ ತುಣುಕು ಬುಧವಾರ ಬೆಳಿಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಾರಿದಾಡುತ್ತಿರುವುದನ್ನು ಗಮನಿಸಿದ್ದ ಪೊಲೀಸರು ಎ.ಆರ್.ಎಂ.ಎಸ್ ಕಾಯ್ದೆ 1959ರ ಅಡಿ ಪ್ರಕರಣ ದಾಖಲಿಸಿಕೊಂಡಿದ್ದರು.
ಇಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಕಳಿಸಿಲಾಗಿದೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಬುಧವಾರ ಸಂಜೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಕ್ಷು ಗಿರಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.