ADVERTISEMENT

ಕಸ ಹಾಕಬೇಡಿ ಎಂದಿದ್ದಕ್ಕೆ ನಿಂದನೆ: ಗ್ರಾ.ಪಂ ಅಧ್ಯಕ್ಷೆಯಿಂದ ದೂರು

​ಪ್ರಜಾವಾಣಿ ವಾರ್ತೆ
Published 5 ಜೂನ್ 2023, 6:40 IST
Last Updated 5 ಜೂನ್ 2023, 6:40 IST

ರಾಯಚೂರು: ಗ್ರಾಮ ಪಂಚಾಯಿತಿ ಮುಂದೆ ಕಸ ಸುರಿಯಬೇಡಿ ಎಂದು ಬುದ್ದಿವಾದ ಹೇಳಿದ್ದಕ್ಕೆ ಸೂರ್ಯ ಪ್ರಕಾಸ ಎಂಬುವವರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಕವಿತಾಳ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರೂ ಪೊಲೀಸರು ಆರೋಪಿಯನ್ನು ಪರಾರಿ ಮಾಡಿಸಿ ನನ್ನನ್ನು ನಿಂದಿಸಿದ್ದಾರೆ. ತಪ್ಪಿತಸ್ಥ ಪಿಐಸ್ಐ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ತೋರಣದಿನ್ನಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಂದಮ್ಮ ಒತ್ತಾಯಿಸಿದರು.

ಅವರು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸೂರ್ಯಪ್ರಕಾಶ ಎನ್ನುವ ವ್ಯಕ್ತಿ ಗ್ರಾಮ ಪಂಚಾಯತಿ ಅಧ್ಯಕ್ಷೆಯಾಗಿರುವ ನನಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಧ್ಯಕ್ಷೆ ಸ್ಥಾನದಿಂದ ಕೆಳಗೆ ಇಳಿಸುತ್ತೇನೆ ಎಂದು ಆವಾಜ್ ಹಾಕಿದ್ದಾರೆ. ಈ ಬಗ್ಗೆ ಮೇ 31ರಂದು ಕವಿತಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಹೋದಾಗ ಕೆಳ ಜಾತಿಯವರೆಂದು ದೂರು ಸ್ವೀಕರಿಸಿಲ್ಲ. ಪಿಎಸ್‌ಐ ಸದ್ದಾಮ್‌ ಹುಸೇನ್‌ ಮೊದಲು ದೂರು ದಾಖಲಿಸಿಕೊಳ್ಳಲಿಲ್ಲ ಆನಂತರ ಪರಿಪರಿಯಾಗಿ ಮನವಿ ಮಾಡಿದಾಗ ದೂರು ದಾಖಲಿಸಿದ್ದಾರೆ ಎಂದರು.

ರಾಜಕೀಯ ಬಲದಿಂದ ಸೂರ್ಯಪ್ರಕಾಶನನ್ನು ಬಂಧಿಸಿಲ್ಲ. ಕೊಪ್ಪಳದಲ್ಲಿರುವ ಅಪರಿಚಿತ ಮಹಿಳೆಯಿಂದ ನನ್ನ ವಿರುದ್ಧ ಸುಳ್ಳು ದೂರು ದಾಖಲಿಸಿದ್ದಾರೆ ಹಾಗೂ ರಾಜಿ ಮಾಡಿಕೊಳ್ಳಬೇಕು ಎಂದು ಬೆದರಿಕೆ ಹಾಕಿದ್ದಾರೆ.  ಕೂಡಲೇ ಆರೋಪಿಯನ್ನು ಬಂಧಿಸಬೇಕು. ಪಿಎಸ್‌ಐ ಸದ್ದಾಮ್‌ ಹುಸೇನ್ ಅವರನ್ನು ಅಮಾನತು ಮಾಡಬೇಕು ಹಾಗೂ ನನ್ನ ವಿರುದ್ಧ ದಾಖಲಿಸಿರುವ  ಸುಳ್ಳು ದೂರನ್ನು ರದ್ದುಪಡಿಸಬೇಕು ಆಗ್ರಹಿಸಿದರು.

ADVERTISEMENT

ಗ್ರಾಮೀಣ ಕೃಷಿ ಕೂಲಿ ಕಾರ್ಮಿಕ ಸಂಘದ ಅಧ್ಯಕ್ಷ ಗಂಗಪ್ಪ ಪತ್ರಿಕಾಗೋಷ್ಠಿಯಲ್ಲಿ ಇದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.