ADVERTISEMENT

ರಾಯಚೂರು ರಾತ್ರಿಯಿಡೀ ಮಳೆ: ಮಸ್ಕಿ ಜಲಾಶಯ ಭರ್ತಿ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2019, 4:04 IST
Last Updated 11 ಅಕ್ಟೋಬರ್ 2019, 4:04 IST
ರಾಯಚೂರು ಜಿಲ್ಲೆಯ ಮಸ್ಕಿ ಜಲಾಶಯ ಭರ್ತಿಯಾಗಿದ್ದು ನೀರು ಹೊರಗೆ ಬಿಡಲಾಗುತ್ತಿದೆ. (ಪ್ರಜಾವಾಣಿ ಚಿತ್ರ)
ರಾಯಚೂರು ಜಿಲ್ಲೆಯ ಮಸ್ಕಿ ಜಲಾಶಯ ಭರ್ತಿಯಾಗಿದ್ದು ನೀರು ಹೊರಗೆ ಬಿಡಲಾಗುತ್ತಿದೆ. (ಪ್ರಜಾವಾಣಿ ಚಿತ್ರ)   

ರಾಯಚೂರು: ಜಿಲ್ಲೆಯ ವಿವಿಧೆಡೆ ರಾತ್ರಿಯಿಡೀ ಮಳೆ ಸುರಿದಿದ್ದು, ಮಸ್ಕಿ ಜಲಾಶಯ ಭರ್ತಿಯಾಗಿದೆ. ಜಲಾಶಯದಿಂದ 3 ಸಾವಿರ ಕ್ಯುಸೆಕ್ ನೀರು ಹೊರಬಿಡಲಾಗುತ್ತಿದೆ.

ಜಲಾಶಯದಿಂದ ಹಳ್ಳಕ್ಕೆ ನೀರು ಹರಿಸುತ್ತಿರುವ ಕಾರಣ,ಕೆಲವು ಗ್ರಾಮಗಳಸಂಪರ್ಕ ಸೇತುವೆ ಮುಳುಗಡೆಯಾಗಿದೆ.

ಪಕ್ಕದ ಕೊಪ್ಪಳ ಜಿಲ್ಲೆಯ ಕುಷ್ಟಗಿ ಹಾಗೂ ಗದಗ ಜಿಲ್ಲೆಯ ಗಜೇಂದ್ರಗಡದಲ್ಲಿ ಮಳೆ ಬೀಳುತ್ತಿರುವುದರಿಂದ ಜಲಾಶಯಕ್ಕೆ 2,500 ಕ್ಯುಸೆಕ್ ಒಳಹರಿವು ಬರುತ್ತಿದೆಎಂದು ಜಲಾಶಯದ ಎಂಜಿನಿಯರ್ ತಿಳಿಸಿದ್ದಾರೆ.

ADVERTISEMENT

0.5 ಟಿಎಂಸಿ ಅಡಿ ಸಾಮರ್ಥ್ಯದ ಜಲಾಶಯವು 10 ವರ್ಷಗಳಲ್ಲಿ ಇದೇ ಮೊದಲ ಬಾರಿ ಸಂಪೂರ್ಣ ಭರ್ತಿಯಾಗಿದ್ದು,ನೀರು ಹೊರಬಿಡಲಾಗುತ್ತಿದೆ.

ಮಾನ್ವಿಯಲ್ಲೂ ಮಳೆ

ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿಯೂ ರಾತ್ರಿಯಿಡೀ ಮಳೆ ಸುರಿದಿದೆ.ಪಟ್ಟಣದ ಕಾಕತೀಯ ಶಾಲಾ ಆವರಣ ಜಲಾವೃತಗೊಂಡಿದೆ.

ಮಾನ್ವಿ ಪಟ್ಟಣದಲ್ಲಿಯೂ ಉತ್ತಮ ಮಳೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.