ADVERTISEMENT

ಅಂಗಡಿಗಳ ಮೇಲೆ ದಾಳಿ: ಪ್ಲಾಸ್ಟಿಕ್‍ ವಶ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2021, 3:16 IST
Last Updated 5 ಅಕ್ಟೋಬರ್ 2021, 3:16 IST
ಕವಿತಾಳದಲ್ಲಿ ಕಿರಾಣಿ ಅಂಗಡಿಯೊಂದರ ಮೇಲೆ ದಾಳಿ ನಡೆಸಿದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ತಿಮ್ಮಪ್ಪ ಜಗ್ಲಿ ಅವರು ಪ್ಲಾಸ್ಟಿಕ್‍ ಸಾಮಗ್ರಿ ವಶಪಡಿಸಿಕೊಂಡರು
ಕವಿತಾಳದಲ್ಲಿ ಕಿರಾಣಿ ಅಂಗಡಿಯೊಂದರ ಮೇಲೆ ದಾಳಿ ನಡೆಸಿದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ತಿಮ್ಮಪ್ಪ ಜಗ್ಲಿ ಅವರು ಪ್ಲಾಸ್ಟಿಕ್‍ ಸಾಮಗ್ರಿ ವಶಪಡಿಸಿಕೊಂಡರು   

ಕವಿತಾಳ: ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ತಿಮ್ಮಪ್ಪ ಜಗ್ಲಿ ನೇತೃತ್ವದಲ್ಲಿ ಅಧಿಕಾರಿಗಳು ಸೋಮವಾರ ಪಟ್ಟಣದ ವಿವಿಧ ಅಂಗಡಿಗಳ ಮೇಲೆ ದಾಳಿ ನಡೆಸಿ ಪ್ಲಾಸ್ಟಿಕ್‍ ಚೀಲ ಮತ್ತು ಲೋಟಗಳನ್ನು ವಶಪಡಿಸಿಕೊಂಡರು.

‘ಮರು ಬಳಕೆ ಸಾಧ್ಯವಾಗದಂಥ ಪ್ಲಾಸ್ಟಿಕ್‍ ಬಳಕೆಯನ್ನು ನಿಷೇಧಿಸಲಾಗಿದೆ. ಆದರೂ ಬಳಸಲಾಗುತ್ತಿದೆ. ಜಿಲ್ಲಾಧಿಕಾರಿ ಆದೇಶದ ಮೇರೆಗೆ ಕಿರಾಣಿ ಹಾಗೂ ಬಟ್ಟೆ ಅಂಗಡಿ, ಹಾರ್ಡ್‌ವೇರ್‌, ವೈನ್‌ಶಾಪ್ ಸೇರಿ ವಿವಿಧ ಅಂಗಡಿಗಳ ಮೇಲೆ ದಾಳಿ ನಡೆಸಲಾಯಿತು. ಅಂದಾಜು 1 ಕ್ವಿಂಟಲ್‌ನಷ್ಟು ಪ್ಲಾಸ್ಟಿಕ್ ಸಾಮಗ್ರಿಗಳನ್ನು ವಶಪಡಿಸಿಕೊ ಳ್ಳಲಾಗಿದೆ. ಸಂಬಂಧಿಸಿದವರಿಗೆ ದಂಡ ವಿಧಿಸಲಾಗಿದೆ’ ಎಂದು ಮುಖ್ಯಾಧಿಕಾರಿ ತಿಮ್ಮಪ್ಪ ಜಗ್ಲಿ ತಿಳಿಸಿದರು.

ಪಟ್ಟಣ ಪಂಚಾಯಿತಿ ಸಿಬ್ಬಂದಿ ಮಾರುತಿ, ಮಹೇಶ, ವೆಂಕಟೇಶ, ಖಲೀಫ್‍, ಆಲಂ, ಸಂತೋಷ, ದುರುಗಪ್ಪ ಮತ್ತು ರಮೇಶ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.