ADVERTISEMENT

ರಾಯಚೂರು | ಹೂವು–ಹಣ್ಣು ವ್ಯಾಪಾರಕ್ಕೆ ಮಳೆ ಅಡ್ಡಿ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2025, 3:59 IST
Last Updated 22 ಅಕ್ಟೋಬರ್ 2025, 3:59 IST
ರಾಯಚೂರಿನಲ್ಲಿ ಮಳೆಯಿಂದಾಗಿ ವ್ಯಾಪಾರಿಗಳು ತೊಂದರೆ ಅನುಭವಿಸಿದರು
ರಾಯಚೂರಿನಲ್ಲಿ ಮಳೆಯಿಂದಾಗಿ ವ್ಯಾಪಾರಿಗಳು ತೊಂದರೆ ಅನುಭವಿಸಿದರು   

ರಾಯಚೂರು: ನಗರ ಸೇರಿದಂತೆ ಜಿಲ್ಲೆಯ ಮಾನ್ವಿ, ಸಿಂಧನೂರು, ಕವಿತಾಳ ಸೇರಿದಂತೆ ಹಲವೆಡೆ ಮಂಗಳವಾರ ಮಧ್ಯಾಹ್ನ ಸುರಿದ ದಿಢೀರ್ ಮಳೆಯಿಂದಾಗಿ ಹೂವು–ಹಣ್ಣಿನ ವ್ಯಾಪಾರಿಗಳು ತೊಂದರೆ ಅನುಭವಿಸಿದರು.

ಕೆಲವು ಕಡೆ ದೀಪಾವಳಿ ಹಬ್ಬಕ್ಕೆ ಮಾರಾಟಕ್ಕಾಗಿ ತಂದಿದ್ದ ಕುಂಬಳಕಾಯಿ, ಚೆಂಡು ಹೂವು, ಬಾಳೆದಿಂಡುಗಳು ಮಳೆ ನೀರಿನಿಂದ ಹಾನಿಗೀಡಾದವು. ಮಂಗಳವಾರ ಲಕ್ಷ್ಮೀ ಪೂಜೆ ಹಾಗೂ ಬುಧವಾರದ ಬಲಿ ಪಾಡ್ಯಮಿ ಹಿನ್ನೆಲೆಯಲ್ಲಿ ಉತ್ತಮ ವ್ಯಾಪಾರದ ನಿರೀಕ್ಷೆಯಲ್ಲಿದ್ದ ಹೂವು ಹಾಗೂ ಹಣ್ಣಿನ ವ್ಯಾಪಾರಿಗಳು ಬೇಸರ ವ್ಯಕ್ತಪಡಿಸಿದರು.

ಚಿತ್ರದುರ್ಗ, ಗಂಗಾವತಿ, ಕಂಪ್ಲಿ ಹಾಗೂ ಮತ್ತಿತರ ದೂರದ ನಗರಗಳಿಂದ ಅಪಾರ ಪ್ರಮಾಣದ ಚೆಂಡು ಹೂವು ಹಾಗೂ ಬಾಳೆ ಎಲೆ ತರಿಸಿದ್ದೇವೆ. ಆದರೆ, ದಿಢೀರ್ ಮಳೆ ನಮ್ಮ ವ್ಯಾಪಾರಕ್ಕೆ ಅಡ್ಡಿ ಉಂಟು ಮಾಡಿದೆ. ಒಂದೆರಡು ದಿನ ವರುಣ ದೇವ ನಮ್ಮ ವ್ಯಾಪಾರಕ್ಕೆ ತೊಂದರೆ ನೀಡದಿದ್ದರೆ ಸಾಕು ಎಂದು ವ್ಯಾಪಾರಿ ಸಂತೋಷ್ ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.