ADVERTISEMENT

ಜಿ.ಪಂ, ತಾ.ಪಂ ಮೀಸಲಾತಿ ಪಟ್ಟಿ ಪ್ರಕಟ

​ಪ್ರಜಾವಾಣಿ ವಾರ್ತೆ
Published 1 ಮೇ 2021, 7:56 IST
Last Updated 1 ಮೇ 2021, 7:56 IST

ರಾಯಚೂರು: ರಾಯಚೂರು ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿಗಳಿಗೆ ನಡೆಯುವ ಚುನಾವಣೆಗೆ ರಾಜ್ಯ ಚುನಾವಣೆ ಆಯೋಗ ಜಿಲ್ಲಾವಾರು ಮೀಸಲಾತಿ ಪಟ್ಟಿ ಹೊರಡಿಸಲಾಗಿದೆ. ಅದು ರಾಯಚೂರು ಜಿಲ್ಲೆಯ ವರ್ಗವಾರು ಮೀಸಲಾತಿ ಪಟ್ಟಿ ಹೀಗಿದೆ.

ರಾಯಚೂರು ಒಟ್ಟು 42 ಜಿಲ್ಲಾ ಪಂಚಾಯಿತಿ ಸ್ಥಾನಗಳು. ಅನುಸೂಚಿತ ಜಾತಿ 9(5 ಮಹಿಳೆ), ಅನುಸೂಚಿತ ಪಂಗಡ 10 (5 ಮಹಿಳೆ), ಹಿಂದುಳಿದ ವರ್ಗ ಅ 2(1ಮಹಿಳೆ), ಹಾಗೂ ಸಾಮಾನ್ಯ 21 (10ಮಹಿಳೆ) ಮೀಸಲಾತಿ ನೀಡಲಾಗಿದೆ.

ತಾಲ್ಲೂಕು ಪಂಚಾಯಿತಿ ಮೀಸಲಾತಿ ವಿವರ:ರಾಯಚೂರು: ಒಟ್ಟು ಸ್ಥಾನಗಳು 22(11), ಅನುಸೂಚಿತ ಜಾತಿ 5(3), ಅನುಸೂಚಿತ ಪಂಗಡ 4(2), ಹಿಂದುಳಿದ ‘ಅ’ 2(1), ಸಾಮಾನ್ಯ 11(5).
ದೇವದುರ್ಗ ಒಟ್ಟು ಸ್ಥಾನಗಳು 19 (10), ಅನುಸೂಚಿತ ಜಾತಿ 4(2), ಅನುಸೂಚಿತ ಪಂಗಡ 7 (4), ಸಾಮಾನ್ಯ 8(4).
ಮಾನ್ವಿ ಒಟ್ಟು ಸ್ಥಾನಗಳು 11(6), ಅನುಸೂಚಿತ ಜಾತಿ 2(1),ಅನುಸೂಚಿತ ಪಂಗಡ 3 (2), ಸಾಮಾನ್ಯ 6(3).
ಸಿರವಾರ ಒಟ್ಟು ಸ್ಥಾನಗಳು 9(5), ಅನುಸೂಚಿತ ಜಾತಿ 2(1), ಅನುಸೂಚಿತ ಪಂಗಡ 2(1), ಸಾಮಾನ್ಯ 5(3).
ಲಿಂಗಸುಗೂರು ಒಟ್ಟು ಸ್ಥಾನಗಳು 18(9), ಅನುಸೂಚಿತ ಜಾತಿ 4(2), ಅನುಸೂಚಿತ ಪಂಗಡ 4(2), ಹಿಂದುಳಿದ ಅ 1(1), ಹಿಂದುಳಿದ 9(4).
ಸಿಂಧನೂರು ಒಟ್ಟು ಸ್ಥಾನಗಳು 20(10), ಅನುಸೂಚಿತ ಜಾತಿ 4(2), ಅನುಸೂಚಿತ ಪಂಗಡ 3(2), ಹಿಂದುಳಿದ ‘ಅ’ 2(2), ಹಿಂದುಳಿದ ಬ 1(0), ಸಾಮಾನ್ಯ 10(4).
ಮಸ್ಕಿ ಒಟ್ಟು ಸ್ಥಾನಗಳು 13(7), ಅನುಸೂಚಿತ ಜಾತಿ 3(2),ಅನುಸೂಚಿತ ಪಂಗಡ 3(2), ಸಾಮಾನ್ಯ 7(3)

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.